



ಚೀನಾ ಹಾಗೂ ಅಮೆರಿಕ ನಡುವಿನ ಜಾಗತಿಕ ತೆರಿಗೆ ಸಮರ ಜೋರಾಗಿದೆ. ಉಭಯ ದೇಶಗಳ ನಡುವೆ ಟ್ಯಾರಿಫ್ ವಾರ್ ನಡೆಯುತ್ತಿರೋ ಬೆನ್ನಲ್ಲೇ ‘ದೊಡ್ಡಣ್ಣ’ನಿಗೆ ಡ್ರ್ಯಾಗನ್ ರಾಷ್ಟ್ರ ಶಾಕ್ ಕೊಟ್ಟಿದೆ.
ಅಮೆರಿಕಾಗೆ ರಫ್ತು ಮಾಡ್ತಿರೋ ಹಲವು ಉತ್ಪನ್ನಗಳನ ಮೇಲೆ ತಾತ್ಕಾಲಿಕ ನಿರ್ಬಂಧ ವಿಧಿಸಿದೆ.ಚೀನಾ ಮೇಲೆ 125 ರಷ್ಟು ತೆರಿಗೆ ಪ್ರಹಾರ ನಡೆಸಿದ್ದಕ್ಕೆ ಪ್ರತೀಕಾರವಾಗಿ ಚೀನಾ ದಿಟ್ಟ ಕ್ರಮ ಕೈಗೊಂಡಿದೆ.
ಪ್ರಮುಖವಾಗಿ ಮೆಟಲ್ಸ್ , ಎಲೆಕ್ಟ್ರಾನಿಕ್ ವಸ್ತುಗಳು, ಏರೋ ಸ್ಪೇಸ್ ಉತ್ಪನ್ನಗಳು, ಆಟೋ ಮೇಕರ್ಸ್ , ಸೆಮಿ ಕಂಡಕ್ಟರ್ ಹಾಗೂ ಗ್ರಾಹಕ ಉಪಯೋಗಿ ವಸ್ತುಗಳ ರಫ್ತಿನ ಮೇಲೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.
ಅಮೆರಿಕಗೆ ಪಾಠ ಕಲಿಸಲು ಚೀನಾ ಪ್ಲಾನ್ ಮಾಡಿದ್ದು, ಮಿಸೈಲ್ ಹಾಗೂ ಕಾರು ನಿರ್ಮಾಣಕ್ಕೆ ಅಮೆರಿಕ ಚೀನಾದ ರಾ ಮೇಟೆರಿಯಲ್ಸ್ ಮೇಲೆ ಡಿಪೆಂಡ್ ಆಗಿದೆ. ಅದರಲ್ಲೂ ಮ್ಯಾಗ್ನೆಟ್ ಗಳ ರಫ್ತು ಸ್ಟಾಪ್ ಮಾಡಲಾಗಿದೆ. ಡೊನಾಲ್ಡ್ ಟ್ರoಪ್ ನೀತಿಗೆ ಪಾಠ ಕಲಿಸಲು ಚೀನಾ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
