
ಪುತ್ತೂರು :ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ಭೀಕರ ದಾಳಿಯನ್ನು ತೀವ್ರವಾಗಿ ಖಂಡಿಸಿ,ದಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರು ವತಿಯಿಂದ ಇಂದು (ಏಪ್ರಿಲ್ 23, 2025)ಸಂಜೆ 7 ಗಂಟೆಗೆ ದರ್ಬೆ ಜುಂಕ್ಷನ್ ನಲ್ಲಿ ಮೊಂಬತ್ತಿ ಉರಿಸಿ ಬೃಹತ್ ಪ್ರತಿಭಟನೆ ನಡೆಯಲಿದೆ.
ಪಹಲ್ಗಾಮ್ ನಲ್ಲಿ ನಡೆದ ಈ ಹೇಯ ಕೃತ್ಯದಲ್ಲಿ ಸುಮಾರು 27 ಮಂದಿ ಅಮಾಯಕ ಪ್ರವಾಸಿಗರು ಮೃತಪಟ್ಟಿದ್ದಾರೆ.
ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಭಾಗವಹಿಸಿ, ಉಗ್ರವಾದದ ವಿರುದ್ಧ ತಮ್ಮ ದೃಢ ನಿಲುವನ್ನು ಪ್ರದರ್ಶಿಸಬೇಕು ಎಂದು ಯುವಜನ ಪರಿಷತ್ ಪುತ್ತೂರು ಮನವಿ ಮಾಡಿದೆ






