

ಪುತ್ತೂರು: ಕಳೆದ 10 ವರ್ಷಗಳಿಂದ ಪುತ್ತೂರಿನ ಕೋರ್ಟ್ ರಸ್ತೆಯ ಫಾರ್ಚೂನ್ ಮಾಲ್ ನಲ್ಲಿ ಕಾರ್ಯಾಚರಿಸುತ್ತಿರುವ 38 ವರ್ಷಗಳ ಇತಿಹಾಸ, ಪರಂಪರೆ ಮತ್ತು ಪರಿಶುದ್ಧತೆಯ ಪ್ರತೀಕವಾಗಿರುವ ಟೋಪ್ಕೋ ಝಂಝಂ ಜ್ಯುವೆಲ್ಲರಿಯ ನವೀಕೃತ ಮಳಿಗೆಯು ಮೇ 12 ರಂದು ಉದ್ಘಾಟನೆಗೊಳ್ಳಲಿದೆ
ನವೀಕೃತ ಮಳಿಗೆಯುನ್ನು ಬಹುಃ ಸಯ್ಯದ್ ಅಲ್ ಹಾಜಿ ಅಹಮದ್ ಪೂಕೋಯ ತಂಙಳ್ ಪುತ್ತೂರು ರವರು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ, ಪುತ್ತೂರು ಚರ್ಚ್‌ನ ಧರ್ಮಗುರುಗಳಾದ ರೆ. ಫಾದರ್ ಲಾರೆನ್ಸ್ ಮುಸ್ಕರೇನ್ಸಸ್ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಈಶ್ವರ್ ಭಟ್ ಪಂಜಿಗುಡ್ಡೆ, ಟೋಪ್ಕೋ ಗ್ರೂಪ್ ಚೆಯರ್ ಮ್ಯಾನ್ ಆಝೀಝ್ ಟಿ.ಕೆ.ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿರಲಿದ್ದಾರೆ.
ಇದಲ್ಲದೆ ರೀಲಾಂಚಿಂಗ್ ಪ್ರಯುಕ್ತ ಗ್ರಾಹಕರಿಗೆ ಮೇ 12ರಿಂದ ಮೇ 17ರವರೆಗೆ ವಿಶೇಷ ರಿಯಾಯಿತಿಯನ್ನು ಸಂಸ್ಥೆ ನೀಡಲಿದೆ. ಈ ಸಂದರ್ಭದಲ್ಲಿ ಚಿನ್ನಾಭರಣಗಳ ಖರೀದಿ ಮಾಡಿದಲ್ಲಿ 4.8%ಮೇಕಿಂಗ್ ಚಾರ್ಜಸ್ ಆಫರ್, ಆ್ಯಂಟಿಕ್ ಆಭರಣಗಳ ಮೇಕಿಂಗ್ ಚಾರ್ಜಸ್ 7.5%, ಹಾಗೂ ಡೈಮಂಡ್ ಮೌಲ್ಯದ ಮೇಲೆ 25% ರಿಯಾಯಿತಿ ದೊರೆಯಲಿದೆ. ಪ್ರತೀ ಖರೀದಿಗೆ ವಿಶೇಷ ರಿಯಾಯಿತಿ ಜೊತೆಗೆ ಮತ್ತಷ್ಟು ಕೊಡುಗೆಗಳು ಲಭಿಸಲಿದೆ. ಆಯ್ದ 10ಮಂದಿ ಗ್ರಾಹಕರಿಗೆ ಬಂಪರ್ ಬಹುಮಾನ ಲಭಿಸಲಿದೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.







