
ಕದನ ವಿರಾಮಕ್ಕೆ ಒಪ್ಪಿದ ನಂತರವು ಪಾಕಿಸ್ತಾನ ಜಮ್ಮು ಸೇರಿದಂತೆ ವಿವಿಧ ಭಾರತದ ಸ್ಥಳಗಳ ಮೇಲೆ ಡ್ರೋನ್, ಕ್ಷಿಪಣಿ ಬಳಸಿ ದಾಳಿ ನಡೆಸಿತ್ತು. ಈ ದಾಳಿಯನ್ನು ಭಾರತೀಯ ಸೇನೆ ವಿಫಲಗೊಳಿಸಿತ್ತು. ಈ ನಂತರ ಇಂದು ಮೇ 12 ರಂದು ಭಾರತ ಮತ್ತು ಪಾಕಿಸ್ತಾನದ ಡಿಜಿಎಂಒಗಳು ಮಾತುಕತೆ ನಡೆಸಿದರು.
ಈ ಮಾತುಕತೆಯ ವೇಳೆ ಕದನ ವಿರಾಮ ಉಲ್ಲಂಘಿಸಿಲ್ಲ ಎಂಬುದಾಗಿ ಪಾಕಿಸ್ತಾನ ಸ್ಪಷ್ಟಪಡಿಸಿದೆ.
ಆಪರೇಷನ್ ಸಿಂದೂರು ನಂತರ ದೇಶಗಳು ಕದನ ವಿರಾಮ ಘೋಷಿಸಿದ ಎರಡು ದಿನಗಳ ನಂತರ, ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒಗಳು) ಸೋಮವಾರ ಸಂಜೆ ಸಭೆ ನಡೆಸಿದರು ಎಂದು ಅಧಿಕೃತ ಮೂಲಗಳು ತಿಳಿಸಿವೆ.





