ಪುತ್ತೂರು: ಕಬಕ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಬೆಂಗಳೂರು ಪುತ್ತೂರು ಘಟಕ, ಬ್ರದರ್ಸ್ ಹೆಲ್ಪ್ ಲೈನ್ ಅಜ್ಜಿನಡ್ಕ ಹಾಗೂ ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಪುತ್ತೂರು ಲೀಜನ್ ಏರಿಯಾ ಆಶ್ರಯದಲ್ಲಿ ಆ.15ರಂದು ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಹವಾಲ್ದಾರ್ ಕೃಷ್ಣಯ್ಯ ಕೆ. ಅವರನ್ನು ಗೌರವಿಸಲಾಯಿತು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ನಝೀರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಸುರೇಖಾ ಸ್ವಾಗತಿಸಿದರು.ಸಾಮಾಜಿಕ ಕಾರ್ಯಕರ್ತೆ ವತ್ಸಲಾ ನಾಯಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆಗಳನ್ನು ಹೇಳಿಕೊಟ್ಟರು. ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕರ್ನಾಟಕ ರಾಜ್ಯ ಸಂಚಾಲಕಿ ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದ ಅಧ್ಯಕ್ಷೆ ಡಾ. ಶಾಂತಾ ಪುತ್ತೂರು, ಸೀನಿಯರ್ ಚೇಂಬರ್ ಇಂಟರ್‌ನ್ಯಾಷನಲ್ ಪುತ್ತೂರು ಲೀಜನ್ ಏರಿಯಾ ಅಧ್ಯಕ್ಷೆ ಸುಮಂಗಲ ಶೆಣೈ, ಕೋಶಾಧಿಕಾರಿ ರೋಹಿಣಿ ಆಚಾರ್ಯ, ಸದಸ್ಯೆ ರತ್ನಾ ನಾಯರ್, ಎಸ್‌ಡಿಎಂಸಿ ಸದಸ್ಯ ಜೈನುದ್ದೀನ್ ಉಪಸ್ಥಿತರಿದ್ದರು.ವಿಜ್ಞಾನ ಶಿಕ್ಷಕಿ ಸುಮಿತ್ರಾ ಅಭಿನಂದನಾ ಭಾಷಣ ಮಾಡಿದರು. ಆಂಗ್ಲ ಭಾಷಾ ಶಿಕ್ಷಕಿ ಯಶೋಧಾ ಸ್ಪರ್ಧಾ ವಿಜೇತರ ಪಟ್ಟಿ ವಾಚಿಸಿದರು. ಹಿಂದಿ ಶಿಕ್ಷಕ ಉದಯ ಎಸ್. ಹಾಗೂ ಸಮಾಜ ವಿಜ್ಞಾನ ಶಿಕ್ಷಕಿ ಸ್ವಪ್ನ ಸಹಕರಿಸಿದರು.ಬ್ರದರ್ಸ್ ಹೆಲ್ಪ್ ಲೈನ್ ಅಜ್ಜಿನಡ್ಕ ಅಧ್ಯಕ್ಷ ಹಾಗೂ ಸೀನಿಯರ್ ಚೇಂಬರ್ ಸದಸ್ಯ ಜಿ.ಎ. ಶಂಸುದ್ದೀನ್ ಅಜ್ಜಿನಡ್ಕ, ಪತ್ರಕರ್ತ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕರ್ನಾಟಕ ರಾಜ್ಯ ಸಂಚಾಲಕ ಜಯಾನಂದ ಪೆರಾಜೆ ಶುಭ ಹಾರೈಸಿದರು. ಸೀನಿಯರ್ ಚೇಂಬರ್ ಸದಸ್ಯರು ಉಪಸ್ಥಿತರಿದ್ದರು. ಕನ್ನಡ ಭಾಷಾ ಶಿಕ್ಷಕಿ ಡಾ. ಶಾಂತಾ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.











