
ಭಾರತಿ ಸಿಮೆಂಟ್ ನಿರ್ದೇಶಕ ಗೋವಿಂದಪ್ಪ ಬಾಲಾಜಿಯನ್ನು ಆಂಧ್ರಪ್ರದೇಶ ಅಬಕಾರಿ ಹಗರಣದ ಆರೋಪದಲ್ಲಿ ಮೈಸೂರಿನಲಿ ಬಂಧಿಸಲಾಗಿದೆ ಆಂಧ್ರದಲ್ಲಿ ನಡೆದ ಸಾವಿರಾರು ಕೋಟಿ ರೂ. ಮೊತ್ತದ ಈ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಗೋವಿಂದಪ್ಪ ಬಾಲಾಜಿ, ಕಳೆದ ಕೆಲವು ದಿನಗಳಿಂದ ತಲೆಮರೆಸಿಕೊಂಡಿದ್ದರು.
ಆಂಧ್ರದಿಂದ ನಾಪತ್ತೆಯಾಗಿದ್ದ ಗೋವಿಂದಪ್ಪ ಬಾಲಾಜಿ ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದರು. ಈ ಬಗ್ಗೆ ಸುಳಿವು ಸಿಕ್ಕ ಹಿನ್ನೆಲೆಯಲ್ಲ್ ಆಂಧ್ರ ಪೊಲೀಸರು ಬೆನ್ನಟ್ಟಿದ್ದರು. ಮೇ 13ಮಂಗಳವಾರ ದಂದು ಗೋವಿಂದಪ್ಪ ಬಾಲಾಜಿಯವರನ್ನು ವಶಕ್ಕೆ ಪಡೆಯಲಾಗಿದ್ದು, ವಿಜಯವಾಡ ಪೊಲೀಸ್ ಠಾಣೆಗೆ ಕರೆದೊಯ್ಯಲಾಗುತ್ತಿದೆ.
ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಬಳಿಕ ನ್ಯಾಯಾಂಗ ಬಂಧನಕ್ಕೆ ಪಡೆಯುವುದಾಗಿ ಪೊಲೀಸರು ತಿಳಿಸಿದ್ದಾರೆ.






