
ಕರೆಂಟ್ ಶಾಕ್ ಹೊಡೆದು ಯುವ ಯಕ್ಷಗಾನ ಕಲಾವಿದ ಸಾವನ್ನಪ್ಪಿದ್ದಾರೆ. ಆಗುಂಬೆ ಸಮೀಪ ವಿದ್ಯುತ್ ತಂತಿ ಮೈ ಮೇಲೆ ಬಿದ್ದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಕಲಾವಿದ ರಂಜಿತ್ ಬನ್ನಾಡಿ ಪ್ರಾಣಬಿಟ್ಟಿದ್ದಾರೆ.
ಮಂಗಳವಾರ ರಾತ್ರಿ ಘಟನೆ ನಡೆದಿದ್ದು,ಕೊಪ್ಪ ಸಮೀಪದಲ್ಲಿದ್ದ ಸೂರಾಲು ಮೇಳದ ಪ್ರದರ್ಶನ ಮಳೆಯಿಂದ ರದ್ದಾದ ಕಾರಣ ಮನೆಗೆ ವಾಪಾಸಾಗುತ್ತಿದ್ದ ವೇಳೆ ದುರಂತ ಸಂಭವಿಸಿದೆ.
ಮರದ ಕೊಂಬೆ ಮುರಿದು ವಿದ್ಯುತ್ ತಂತಿ ಮೇಲೆ ಬಿದ್ದಿದೆ. ಇದ್ರಿಂದ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ರಂಜಿತ್ ಗಂಭೀರ ವಿದ್ಯುತ್ ಶಾಕ್ ge ಒಳಗಾಗಿದ್ದಾರೆ. ಸ್ಥಳಿಯರ ಸಹಕಾರದಿಂದ ಹಿಂಬದಿ ಸವಾರ ವಿನೋದ್ ರಾಜ್ ಪಾರಾಗಿದ್ದಾರೆ.
ವಿನೋದ್ ರಾಜ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.






