
ಪುತ್ತೂರು: ಪುತ್ತೂರು ಪಡೀಲ್‌ನಲ್ಲಿರುವ ಬಾರ್ &
ರೆಸ್ಟೋರೆಂಟ್‌ವೊಂದರ ಸಿಬ್ಬಂದಿ ಪೂರ್ಲಿಪ್ಪಾಡಿ ನಿವಾಸಿ ಪದ್ಮನಾಭ(42) ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಪುತ್ತೂರು ಪಡೀಲ್‌ನಲ್ಲಿರುವ ಬಾರ್ ಆಂಡ್ ರೆಸ್ಟೋರೆಂಟ್‌ವೊಂದರಲ್ಲಿ ಅಡುಗೆ ತಯಾರಿಕೆ ಕೆಲಸ ನಿರ್ವಹಿಸುತ್ತಿದ್ದ ಅವರು ಮೇ.13ರಂದು ಕಲ್ಲಡ್ಕ ಸಮೀಪ ಪೂರ್ಲಿಪ್ಪಾಡಿ ಮನೆಗೆ ತೆರಳಿದ್ದರು. ಮನೆಯಲ್ಲಿ ಅವರ ಪತ್ನಿ ಪೂಜಾ ಕಾರ್ಯಕ್ರಮಕ್ಕೆ ತೆರಳಿದ್ದರು. ಮೇ.14ರಂದು ಮನೆಗೆ ಹಿಂತಿರುಗಿದ ವೇಳೆ ಪದ್ಮನಾಭ ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಬಂಟ್ವಾಳ ಪೊಲೀಸರು ಸ್ಥಳಕ್ಕೆ ತೆರಳಿರುವುದಾಗಿ ಮಾಹಿತಿ ಲಭ್ಯವಾಗಿದೆ.






