ಕೋಮುದ್ವೇಷದ ಭಾಷಣ ಮಾಡಿ ಶಾಂತಿ ಮತ್ತು ನೆಮ್ಮದಿಯನ್ನು ಕದಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭರತ್ ಕುಮ್ಡೇಲು ಎಂಬಾತನ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಪುತ್ತೂರಿನ ಜೈನ ಭವನದಲ್ಲಿ ನಡೆದ ಸುಹಾಸ್ ಶೆಟ್ಟಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಭರತ್ ಕುಮ್ಡೇಲು ಸುಹಾಸ್ ಹತ್ಯೆಯಂತಹ ಹತ್ಯೆಗಳು ಈ ಹಿಂದೆಯೂ ನಡೆದಿದೆ. ಆದರೆ ಸುಹಾಸ್ ನನ್ನು ಅತ್ಯಂತ ಬರ್ಭರವಾಗಿ ಮಾಡಿದ್ದಾರೆ. ಈ ಹತ್ಯೆಯ ವಿಡಿಯೋ ನೋಡಿದ ಬಳಿಕ ಹಿಂದೂ ತಾಯಂದಿರುವ ಭಯ ಪಟ್ಟಿದ್ದಾರೆ. ಆದರೆ ಇಂಥ ಹತ್ಯೆಗಳು ಹಿಂದೂ ಸಮಾಜಕ್ಕೆ ಹೊಸದೇನಲ್ಲ. ಮುಖದಲ್ಲಿ ಒಂದು ಸ್ಟಿಚ್ ಹಾಕಲೂ ಜಾಗವಿಲ್ಲದಂತೆ ಕಡಿದ ಹಿಂದೂಗಳು ಇಲ್ಲಿದ್ದಾರೆ. ಸಾಮಾನ್ಯವಾಗಿ ಹಿಂದೂ ಕಾರ್ಯಕರ್ತನ ಹತ್ಯೆ ನಡೆದರೆ ಕೆಲವೇ ದಿನಗಳಲ್ಲಿ ಇನ್ನೊಂದು ಹತ್ಯೆ ನಡೆಯುತ್ತಿತ್ತು. ಆದರೆ ಸುಹಾಸ್ ಹತ್ಯೆಯ‌ ಬಳಿಕ ಪ್ರತೀಕಾರ ನಡೆದಿಲ್ಲ.

ಸುಹಾಸ್ ನನ್ನು ಯಾವ ರೀತಿ ಹತ್ಯೆ ಮಾಡಬೇಕು ಅದೇ ರೀತಿಯ ಹತ್ಯೆ ನಡೆಯಬೇಕು, ಎಲ್ಲವನ್ನೂ ಹಿಂದೂ ಸಮಾಜ ಸಹಿಸಿ ಕುಳಿತುಕೊಳ್ಳಲು ಇದು ಕಾಶ್ಮೀರವಲ್ಲ, ಮಂಗಳೂರು. ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆ,ಮಹಿಳೆಯರ ಅತ್ಯಾಚಾರ ನಡೆದರೂ ಸಹಿಸಿ‌ ಕೂರಬೇಕಾದ ಪರಿಸ್ಥಿತಿ ಇದೆ. ಆದರೆ ಮಂಗಳೂರಿನಲ್ಲಿ ಇದು ನಡೆಯಲ್ಲ ಎಂದರು. ಸುಹಾಸ್ ಹತ್ಯೆ ಪ್ರಕರಣದಲ್ಲಿ ಸ್ಪೀಕರ್ ಯು.ಟಿ.ಖಾದರ್ ರನ್ನು ಪೋಲೀಸರು ತನಿಖೆ ಮಾಡಬೇಕು. ಅವರಿಗೆ ಈ ಹತ್ಯೆ ನಡೆಯುವ ವಿಚಾರ ಮೊದಲೇ ತಿಳಿದಿದೆ ಭರತ್ ಕುಮ್ಡೇಲು ಆರೋಪಿಸಿದ್ದಾರೆ. ಭರತ್ ಕುಮ್ಡೇಲು ವಿಡಿಯೋ ವೈರಲ್ ಆಗುತ್ತಿದ್ದಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!