ಪಾಣೆಮಂಗಳೂರಿನ ನೆಹರೂನಗರದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸು ಓವರ್ ಟೇಕ್ ಭರದಲ್ಲಿ ಸ್ಕೂಟರ್ ರೊಂದಕ್ಕೆ ಢಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ಭಾನುವಾರ (ಮೇ 18) ತಡರಾತ್ರಿ ನಡೆದಿದೆ.
ಮಂಗಳೂರು ನಿವಾಸಿ ಅಲಿಸ್ಟರ್ ಡಿಸೋಜ(24) ಮೃತಪಟ್ಟವರು. ಅವರು ವಿಟ್ಲದಲ್ಲಿ ನಡೆದ ಗೃಹಪ್ರವೇಶದಲ್ಲಿ ಪಾಲ್ಗೊಂಡು ಮತ್ತೊಂದು ಬೈಕಿನಲ್ಲಿದ್ದ ಸ್ನೇಹಿತರ ಜತೆ ಮಂಗಳೂರಿಗೆ ಹಿಂದಿರುಗುತ್ತಿದ್ದ ವೇಳೆ ಘಟನೆ ನಡೆದಿದೆ.
ಮಂಗಳೂರು ಭಾಗದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆ ಎಸ್ ಆರ್ ಟಿಸಿ ಅಂಬಾರಿ ಬಸ್ಸು ನೆಹರೂನಗರದಲ್ಲಿ ಟೆಂಪೊ ಟ್ರಾವೆಲರ್ ಅನ್ನು ಓವರ್ ಟೇಕ್ ಮಾಡುವ ಭರದಲ್ಲಿ ಸ್ಕೂಟರಿಗೆ ಢಿಕ್ಕಿ ಹೊಡೆದಿದೆ.
ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














