ಜಿಲ್ಲೆಯಾದ್ಯಂತ ಮಂಗಳವಾರ ಮುಂಜಾನೆಯಿಂದಲೇ ಭಾರಿ ಮಳೆ ಸುರಿಯುತ್ತಿದೆ.ಉಡುಪಿ ನಗರ ವ್ಯಾಪ್ತಿಯಲ್ಲಿ ಸುರಿದ ಧಾರಾಕಾರ ಮಳೆಗೆ ಅಂಬಲಪಾಡಿ, ಕರಾವಳಿ ಬೈಪಾಸ್ ಮೊದಲಾದೆಡೆ ರಸ್ತೆಗಳಲ್ಲಿ ಮಳೆನೀರು ಸಂಗ್ರಹಗೊಂಡು ವಾಹನ ಸವಾರರಿಗೆ ತೊಂದರೆಯಾಯಿತು.

ಅಂಬಲಪಾಡಿಯಲ್ಲಿ ಮೇಲ್ಲೇತುವೆ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಸರ್ವಿಸ್ ರಸ್ತೆ ಕೆರೆಯಂತಾಗಿ ವಾಹನಗಳ ಸಂಚಾರಕ್ಕೆ ತೊಡಕುಂಟಾಯಿತು.ಮೀನುಗಾರರು ಸಮುದ್ರಕ್ಕಿಳಿಯದಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಮಣಿಪಾಲದಲ್ಲಿ ಕಿತ್ತು ಬಂದ ತೋಡು:

ಮಣಿಪಾಲದ ಐನಾಕ್ಸ್ ಬಳಿ ತೋಡು ಕಿತ್ತುಹೋದ ಪರಿಣಾಮ ಕಲ್ಲುಗಳು ರಸ್ತೆಗೆ ಬಂದಿದ್ದು, ಹಲವು ಹೊತ್ತು ವಾಹನ ದಟ್ಟನೆ ಕಂಡುಬಂತು. ಅನಂತರ ಸ್ಥಳೀಯರ ಸಹಕಾರದಿಂದ ತೆರವುಗೊಳಿಸಲಾಯಿತು. ಜೆಸಿಬಿ ಮೂಲಕ ರಸ್ತೆ ಮಧ್ಯೆ ಬಿದ್ದಿರುವ ಕಲ್ಲುಗಳನ್ನು ತೆರವುಗೊಳಿಸಲಾಗಿದೆ

Leave a Reply

Your email address will not be published. Required fields are marked *

Join WhatsApp Group
error: Content is protected !!