ಚ್.ಡಿ.ಕೋಟೆ (HD Kote) ತಾಲೂಕಿನ ಬೂದನೂರು ಕೆರೆಗೆ (Budanur Lake) ಹಾರಿ ಒಂದೇ ಕುಟಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹದೇವಸ್ವಾಮಿ, ಪತ್ನಿ ಮಂಜುಳಾ, ಪುತ್ರಿ ಹರ್ಷಿತಾ ಮೃತ ದುರ್ದೈವಿಗಳು. ಮಹದೇವಸ್ವಾಮಿ ಹಿರಿಯ ಪುತ್ರಿ ಅರ್ಪಿತಾ ಯುವಕನೋರ್ವನೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ

ಇದರಿಂದ ತಂದೆ ಮಹದೇವಸ್ವಾಮಿ, ತಾಯಿ ಮಂಜುಳಾ ಮತ್ತು ಸಹೋದರಿ ಹರ್ಷಿತಾ ಮನನೊಂದಿದ್ದರು.

ನಂತರ , ಮೂವರೂ ಕಾಣೆಯಾಗಿದ್ದು, ಇವರ ಚಪ್ಪಲಿಗಳು ಮತ್ತು ಬೈಕ್ ಬೂದನೂರು ಕೆರೆ ಏರಿ ಮೇಲೆ ಪತ್ತೆಯಾಗಿದೆ. ಮೂವರೂ ಕೆರೆಗೆ ಹಾರಿ ಮೃತಪಟ್ಟಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಶೋಧಕಾರ್ಯ ನಡೆಸಿದಾಗ, ಮೂವರ ಶವ ಕೆರೆಯಲ್ಲಿ ಪತ್ತೆಯಾಗಿದೆ.

ಅಗ್ನಿಶಾಮಕ ದಳ ಸಿಬ್ಬಂದಿ ಶವಗಳನ್ನು ಹೊರ ತೆಗೆದರು. ಶವಗಳ ಸೊಂಟದಲ್ಲಿ ಹಗ್ಗ ಇದ್ದು, ಮೂವರು ಹಗ್ಗ ಕಟ್ಟಿಕೊಂಡು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಗೊತ್ತಿಗಿದೆ. ಮೂವರ ಮೃತ ದೇಹ ಒಂದೇ ಸ್ಥಳದಲ್ಲಿ ಪತ್ತೆಯಾಗಿವೆ. ಹೆಚ್ ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!