
ಪಂಜಾಬ್ನ ಪಠಾಣ್ಕೋಟ್ ಜಿಲ್ಲೆಯ ನಂಗಲ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹಲೆದ್ ಎಂಬಲ್ಲಿ ಭಾರತೀಯ ವಾಯುಪಡೆಯ ಅಪಾಚೆ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದೆ.
ಅಪಾಚೆ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಸಂದರ್ಭದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ. ಪೈಲಟ್ಗಳು ಕೂಡಾ ಸುರಕ್ಷಿತವಾಗಿದ್ದಾರೆ. ಪಠಾಣ್ಕೋಟ್ ವಾಯುಪಡೆ ನಿಲ್ದಾಣದಿಂದ ಹೊರಟಿದ್ದ ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ತೆರೆದ ಮೈದಾನದಲ್ಲಿ ಲ್ಯಾಂಡ್ ಮಾಡಲಾಗಿದೆ
ಹೆಲಿಕಾಪ್ಟರ್ ಇಳಿಯುವುದನ್ನು ನೋಡಿದ ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದರು.
ತುರ್ತು ಲ್ಯಾಂಡಿಂಗ್ಗೆ ಕಾರಣವೇನು ಎಂಬುದರ ಕುರಿತು ವಾಯುಪಡೆ ಅಥವಾ ಜಿಲ್ಲಾಡಳಿತದಿಂದ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಸ್ಥಳದಲ್ಲಿದ್ದ ಹಿರಿಯ ಅಧಿಕಾರಿಗಳು ಕಾರ್ಯಾಚರಣೆ ಮತ್ತು ಭದ್ರತಾ ಕಾರಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.






