
ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆಯಾದ ಘಟನೆ ಬಂಟ್ವಾಳ ತಾಲೂಕಿನ ಅಮ್ಮುಂಜೆಯಲ್ಲಿ ಸೋಮವಾರ (ಜೂ.16) ನಡೆದಿದೆ.
ಅಮ್ಮುಂಜೆ ನಿವಾಸಿ ಸಾಗರ್ (28 ವ) ಮೃತ ಯುವಕ.
ಪೈಟಿಂಗ್ ಕೆಲಸ ಮಾಡಿಕೊಂಡಿದ್ದ ಸಾಗರ್ ಜೂ.14ರಂದು ತಾಯಿಯೊಂದಿಗೆ ಬಿ.ಸಿ.ರೋಡಿಗೆ ಹೋಗಿ ಬಂದಿದ್ದ.
ಸಂಜೆ 5 ಸಮಯದಲ್ಲಿ ಹಿಂದೆ ಬರುವಾಗ ಬೆಂಜನಪದವು ಮೂರು ಮಾರ್ಗ ಬಳಿ ಆಟೋದಿಂದ ಇಳಿದು ಹೋದವನು ಮನೆಗೆ ಮರಳಿರಲಿಲ್ಲ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಸೋಮವಾರ ವಿದ್ಯಾನಗರ ಹೈಸ್ಕೂಲ್ ರೋಡ್ ಎಂಬಲ್ಲಿ ಸಾಗರನ ಶವ ಹೊಂಡದಲ್ಲಿ ಪತ್ತೆಯಾಗಿದೆ. ಕಾಲು ಜಾರಿಯೋ ಅಥವಾ ಅಮಲು ಪದಾರ್ಥ ಸೇವಿಸಿಯೋ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






