ಉ ತ್ತರ ಪ್ರದೇಶದ ಮಹಾರಾಜ್‌ಗಂಜ್‌ನ ವ್ಯಕ್ತಿಯೊಬ್ಬರು ತಮ್ಮ ಭಾವಿ ಪತ್ನಿ ಸಾವನ್ನಪ್ಪಿದ ನಂತರವೂ ಮೃತದೇಹದೊಂದಿಗೆ ಮದುವೆಯಾಗಿ ಆಕೆಯ ಕೊನೆಯ ಆಸೆ ಈಡೇರಿಸಿದ್ದಾರೆ.

ಉತ್ತರನಿಚ್ಲೌಲ್‌ನ ಕೃಷ್ಣ ನಗರ ಪ್ರದೇಶದ 23 ವರ್ಷದ ಪ್ರಿಯಾಂಕಾ ಮಾಧೇಸಿಯಾಗೂ 29 ವರ್ಷದ ಸನ್ನಿ ಮಧೇಸಿಯಾ ಮದುವೆ ನಿಶ್ಚಯವಾಗಿದ್ದು, ನವೆಂಬರ್‌ನಲ್ಲಿ ಮದುವೆ ದಿನಾಂಕ ನಿಗದಿ ಪಡಿಸಲಾಗಿತ್ತು

ಪ್ರಿಯಾಂಕಾ ಹಾಗೂ ಸನ್ನಿ ಒಬ್ಬರನ್ನೊಬ್ಬರು ಬಹಳ ಪ್ರೀತಿಸುತ್ತಿದ್ದರು. ಅದೇನಾಯ್ತೋ ಗೊತ್ತಿಲ್ಲ ಎರಡು ದಿನಗಳ ಹಿಂದೆ ಇಬ್ಬರು ಜಗಳ ಮಾಡಿಕೊಂಡಿದ್ದಾರೆ.

ಭಾವಿ ಪತಿಯೊಂದಿಗೆ ಜಗಳವಾಡಿದಕ್ಕೆ ಮನನೊಂದ ಪ್ರಿಯಾಂಕಾ ಅದೇ ದಿನ ರಾತ್ರಿ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಭಾವಿ ಪತ್ನಿಯ ಸಾವಿನ ಸುದ್ದಿ ಕೇಳುತ್ತಿದ್ದಂತೆ ಸನ್ನಿ ಕುಸಿದು ಹೋಗಿದ್ದ.

ಇತ್ತ ಯುವತಿಯ ಮನೆಯಲ್ಲಿ ಅಂತಿಮ ಕಾರ್ಯಗಳು ನಡೆಯುವ ವೇಳೆಗೆ ಅಲ್ಲಿಗೆ ಬಂದ ಸನ್ನಿ ಪುರೋಹಿತರೊಬ್ಬರ ಸಮ್ಮುಖದಲ್ಲಿ ಆಕೆಯ ಮೃತದೇಹದೊಂದಿಗೆ ಮದುವೆಯಾಗಿದ್ದಾನೆ. ಆಕೆಯ ಹಣೆಗೆ ಸನ್ನಿ ಕುಂಕುಮ ಇಡುತ್ತಿದ್ದಂತೆ ಎಲ್ಲರೂ ದಿಗ್ಭ್ರಮೆಗೊಂಡರು. ಆದರೆ ಆಕೆ ನನ್ನೊಂದಿಗೆ ಮದುವೆಯಾಗುವ ಕನಸು ಹೊತ್ತಿದ್ದಳು. ಆಕೆಯ ಕೊನೆಯ ಆಸೆಯನ್ನು ಈಡೇರಿಸುತ್ತೇನೆ ಎಂದು ಗೋಳಾಗುತ್ತಿದ್ದಂತೆ ಎಲ್ಲರೂ ಆತನಿಗೆ ಸಹಾಯ ಮಾಡಿದ್ದಾರೆ.

ಆರತಿ ಸೇರಿದಂತೆ ಮದುವೆಯಲ್ಲಿ ಮಾಡುವ ಎಲ್ಲಾ ಶಾಸ್ತ್ರಗಳನ್ನು ಸನ್ನಿ ಹಾಗೂ ಪ್ರಿಯಾಂಕಾ ಮೃತದೇಹಕ್ಕೆ ಮಾಡಲಾಗಿದೆ. ಈ ಘಟನೆ ಎಲ್ಲರಲ್ಲೂ ಅಚ್ಚರಿಯುಂಟು ಮಾಡಿದ್ದು, ಭಾವಿ ಪತ್ನಿಯ ಮೇಲೆ ಸನ್ನಿಗೆ ಇರುವ ಪ್ರೀತಿಯನ್ನು ಮೆಚ್ಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!