ಪುತ್ತೂರು: ಪುತ್ತೂರು ನಗರಾಯೋಜನಾ ಪ್ರಾಧಿಕಾರ ಕಚೇರಿ(ಪುಡಾ) ಗೆ ಹೆಚ್ಚುವರಿ ಸಿಬಂದಿಗಳನ್ನು ನೇಮಕ ಮಾಡುವಂತೆ ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ ದೀಪಾಚೋಲನ್ ಅವರಿಗೆ ಶಾಸಕ ಅಶೋಕ್ ರೈ ಮನವಿ ಮಾಡಿದ್ದಾರೆ.

ಶುಕ್ರವಾರ ಬೆಂಗಳೂರಿನಲ್ಲಿ ಇಲಾಖೆಯ ಕಾರ್ಯದರ್ಶಿಯವರನ್ನು ಭೇಟಿಯಾದ ಶಾಸಕರು ಸಿಬಂದಿಗಳ ಕೊರತೆ ಇರುವ ಕಾರಣಕ್ಕೆ ಕಡತಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿದ್ದು ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಪುತ್ತೂರು ತಾಲೂಕು ದೊಡ್ಡ ಕಾರ್ಯವ್ಯಾಪ್ತಿಯನ್ನು ಹೊಂದಿದ್ದು ಗ್ರಾಮೀಣ ಭಾಗದ ೯/೧೧ ಪುಡಾ ಕಚೇರಿಯಲ್ಲೇ ಆಗುತ್ತಿರುವ ಕಾರಣ ಸಿಬಂದಿಗಳ ಕೊರತೆಯಿಂದ ಕೆಲಸಗಳು ವಿಳಂಬವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿದೆ. ಈ ನಿಟ್ಟಿನಲ್ಲಿ ಪುಡಾ ಕಚೇರಿಗೆ ಆದಷ್ಟು ಶೀಘ್ರದಲ್ಲಿ ಸಿಬಂದಿಗಳ ನೇಮಕ ಮಾಡುವಂತೆ ಶಾಸಕರು ಮನವಿಯಲ್ಲಿ ಆಗ್ರಹಿಸಿದ್ದಾರೆ. ಇದೇ ಸಂದರ್ಭದಲ್ಲಿ ನಗರದಲ್ಲಿ ನಿರ್ಮಾಣವಾಗಲಿರುವ ಬೃಹತ್ ರಾಷ್ಟ್ರದ್ವಜ ಹಾರಾಟ ಕೇಂದ್ರ ನಿರ್ಮಾಣವಾಗಲಿದ್ದು ಈ ವಿಚಾರವನ್ನು ಕಾರ್ಯದರ್ಶಿಯವರ ಗಮನಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ಪುಡಾ ಸದಸ್ಯರಾದ ಅನ್ವರ್ ಖಾಸಿಂ ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *

Join WhatsApp Group
error: Content is protected !!