
ಪುತ್ತೂರು: ಬನ್ನೂರಿನ ಮೇಲ್ಮಜಲು ನಿವಾಸಿ ಅಣ್ಣಪ್ಪ (26 ವ.) ಜೂನ್ 21 ಶನಿವಾರ ಬೆಳಿಗ್ಗೆ ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು.
ಪುತ್ತೂರಿನ ಸೇವಾ ಸಂಸ್ಥೆ ಸಹಾಯಹಸ್ತ ಲೋಕಸೇವಾ ಟ್ರಸ್ಟಿನ ಮೂಲಕ ವಿಶೇಷ ವೇಷ ಧರಿಸಿ ಹಲವಾರು ಬಡ ಕುಟುಂಬದ ಮಕ್ಕಳಿಗೆ ಮತ್ತು ಆರೋಗ್ಯದ ಸಮಸ್ಯೆ ಇರುವಂತಹ ವ್ಯಕ್ತಿಗಳಿಗೆ ಕಾರ್ಯಕ್ರಗಳಲ್ಲಿ ವಿವಿಧ ರೀತಿಯ ವೇಷ ಹಾಕಿ ಅದರಲ್ಲಿ ಬಂದಂತಹ ಹಣವನ್ನು ಅವರ ಕೈಗೆ ಒಪ್ಪಿಸುತ್ತಿದ್ದರು
ತನ್ನದೇ ಆದ ಕಲಾಸಿರಿ ಗೊಂಬೆ ಬಳಗ (ರಿ) ಪುತ್ತೂರು ಇದನ್ನು ಪ್ರಾರಂಭಿಸಿದರು. ವರ್ಷದಲ್ಲಿ ಒಂದು ದಿನ ಗೊಂಬೆ ವೇಷ ಧರಿಸಿ ಅದರಲ್ಲಿ ಬಂದಂತಹ ಹಣವನ್ನು ಬಡಕುಟುಂಬಗಳಿಗೆ ಹಾಗೂ ಅನಾರೋಗ್ಯದಿಂದ ಇರುವ ಕುಟುಂಬಗಳಿಗೆ ಧನಸಹಾಯದ ಮೂಲಕ ಸಹಾಯ ಮಾಡಿದ್ದಾರೆ.
ಮೃತರು ಸಹೋದರಿಯನ್ನು ಅಗಲಿದ್ದಾರೆ.






