ಹೆಲ್ಪ್ ಲೈನ್ ಹೆಸರಲ್ಲಿ ಗಾಯಕನಿಗೆ ಮಹಿಳೆಯೊಬ್ಬರು ಲಕ್ಷ ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.ವೃತ್ತಿಯಲ್ಲಿ ಗಾಯಕನಾಗಿರುವ ಕೆ.ರಾಜೇಶ್ ಲೈವ್ ಸಂಗೀತ ಕಾರ್ಯಕ್ರಮ ನೀಡುತ್ತಿದ್ದರು. ಅರವಿಂದ್ ವಿವೇಕ್ ಎಂಬ ಫೇಸ್ ಬುಕ್ ಪೇಜ್ ಮೂಲಕ ಹೆಲ್ಪ್ ಲೈನ್ ಹೆಸರಲ್ಲಿ ಬೆಂಗಳೂರಿನ ಸಂಧ್ಯಾ ಪವಿತ್ರಾ ಎಂಬ ಮಹಿಳೆ ಲಕ್ಷ ಲಕ್ಷ ವಂಚನೆ ಎಸಗಿದ್ದಾಳೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಗಾಯಕ, ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕ್ರೆ.ರಾಜೇಶ್ ದೂರಿನ ಹಿನ್ನೆಲೆಯಲ್ಲಿ ಸಂಧ್ಯಾ ಪವಿತ್ರಾ ವಿರುದ್ಧ ಪ್ರಕರಣ ದಾಖಲಾಗಿದೆ.

ದೂರುದಾರ ರಾಜೇಶ್ ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ ನ ಮಾರಾಡಿ ನಿವಾಸಿಯಾಗಿದ್ದು, 2024ರಲ್ಲಿ ಫೇಸ್ ಬುಕ್ ಮೂಲಕ ಸಧ್ಯಾ ಪವಿತ್ರಾಳ ಪರಿಚಯವಾಗಿದೆ. ವಂಚನೆಗೊಳಗಾದವರಿಗೆ ನೆರವು ನೀಡುವುದಾಗಿ ಹೇಳಿದ್ದಳು. ಅಲ್ಲದೇ ಹೈಕೋರ್ಟ್ ಮೂಲಕ ಕೇಸ್ ಬಗೆಹರಿಸಿಕೊಡುತ್ತೇನೆ ಸ್ವಲ್ಪ ಹಣ ಖರ್ಚಾಗುತ್ತೆ ಎಂದು ಹೇಳಿ ಹಂತ ಹಂತವಾಗಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾಳೆ. ಪ್ರಶ್ನೆ ಮಾಡಿದ್ದಕ್ಕೆ ಕೈಕಾಲು ಮುರಿಯುವುದಾಗಿ ಬೆದರಿಕೆ ಹಾಕಿದ್ದಾಳಂತೆ. ಮೋಸ ಹೋದ ರಾಜೇಶ್ ಇದೀಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!