ಬಡವರ ಬಳಿ ದುಡ್ಡು ತಗೊಂಡು ಮನೆ ಕೊಟ್ಟಿದ್ರೆ ಹುಳ ಬಿದ್ದು ಸಾಯ್ತಾರೆ ಎಂದು ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.


ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಜಮೀರ್ ಹಣ ಪಡೆದು ಮನೆ ನೀಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಬಿ.ಆರ್ ಪಾಟೀಲ್ ಹೇಳಿಕೆ ಬಗ್ಗೆ ತನಿಖೆ ನಡೆಸಬೇಕು

ಬಡವರ ಬಳಿ ದುಡ್ಡು ತಗೊಂಡು ಮನೆ ಕೊಟ್ಟಿದ್ರೆ ಹುಳ ಬಿದ್ದು ಸಾಯ್ತಾರೆ. ದುಡ್ಡು ತಗೊಂಡವರು ಒಳ್ಳೆದು ಆಗ್ತಾರಾ.. ? ಉದ್ದಾರ ಆಗುತ್ತಾರಾ..ದೇವರು ಒಳ್ಳೆದು ಮಾಡ್ತಾರಾ ಎಂದು ಸಚಿವ ಜಮೀರ್ ಹೇಳಿದರು.

ದುಡ್ಡು ಪಡೆದು ಬಡವರಿಗೆ ಮನೆ ಹಂಚಬೇಕಾ..? ಹಾಗೆ ಮಾಡಿದ್ರೆ ನಮ್ಮ ಕುಟುಂಬಕ್ಕೆ ಒಳ್ಳೆದಾಗುತ್ತಾ…? ಎಂದರು.
ಯಾವುದೇ ಆರೋಪ ಮಾಡಿದ ಹೆಸರು ಹೇಳಬೇಕಲ್ವಾ..? ಬೇಕಾದರೆ ಇದರ ತನಿಖೆಯನ್ನು ಸಿಬಿಐಗೂ ಕೊಡಿ..ಬಿ.ಆರ್ ಪಾಟೀಲ್ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದರು. ಮೂರು ಹಂತದಲ್ಲಿ ನಾವು ಮನೆಗಳನ್ನು ಹಂಚಿಕೆ ಮಾಡುತ್ತೇವೆ. ನಾವು ಯಾವುದೇ ಹೊಸ ಟಾರ್ಗೆಟ್ ನೀಡಿಲ್ಲ ಎಂದರು.

ಭ್ರಷ್ಟಾಚಾರ ಆಗಿದೆ ಅಂದರೆ ದಾಖಲೆ ಕೊಡಬೇಕಲ್ವಾ..? . ನಾನು ಸತ್ಯ ಹರಿಶ್ಚಂದ್ರ ಅಂತ ಹೇಳ್ತಿಲ್ಲ, ಬಡವರ ಮನೆಯ ದುಡ್ಡು ತಿನ್ನುವಷ್ಟು ದರಿದ್ರ ನನಗೆ ಬಂದಿಲ್ಲ, ದುಡ್ಡು ತಗೊಂಡವರು ಒಳ್ಳೆದು ಆಗ್ತಾರಾ..? ಬಿ.ಆರ್ ಪಾಟೀಲ್ ಹಿರಿಯವರು, ಬಹಳ ಒಳ್ಳೆಯವರು. ಈ ಬಗ್ಗೆ ಅವರ ಜೊತೆ ನಾನು ಮಾತನಾಡಿಲ್ಲ ಎಂದರು

Leave a Reply

Your email address will not be published. Required fields are marked *

Join WhatsApp Group
error: Content is protected !!