ಲಾೖಲ ಗ್ರಾಮದ ವಿವೇಕಾನಂದ ನಗರದ ಸೋಮಣ್ಣ ಕುಂಬಾರ ಅವರ ಪುತ್ರ ಸಂದೀಪ್‌ ಕುಲಾಲ್‌ (28) ಅವರು ಅಲ್ಪಕಾಲದ ಅನಾರೋಗ್ಯದಿಂದ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಭವಿಸಿದೆ.

ಕೆಲವು ದಿನಗಳ ಹಿಂದೆ ಸಂದೀಪ್‌ ಅವರನ್ನು ಜಾಂಡೀಸ್‌ ಬಾಧಿಸಿದ್ದು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದರು. ಆದರೆ ಎರಡು ದಿನಗಳಿಂದ ಮತ್ತೆ ಜ್ವರ ಉಲ್ಬಣಗೊಂಡು ಜೂ. 24ರಂದು ಮೃತಪಟ್ಟಿದ್ದಾರೆ.

ವೃತ್ತಿಯಲ್ಲಿ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್‌ ಕೆಲಸ ಮಾಡುತ್ತಿದ್ದ ಅವರು ಕಬಡ್ಡಿ ಆಟಗಾರರಾಗಿದ್ದರು. ಹಲವಾರು ಸಂಘ – ಸಂಸ್ಥೆಗಳಲ್ಲೂ ಗುರುತಿಸಿಕೊಂಡಿದ್ದರು.

ಮೃತರು ತಂದೆ, ತಾಯಿ, ಪತ್ನಿ, ಐದು ತಿಂಗಳ ಮಗು ಹಾಗೂ ಸಹೋದರನನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!