
ಪುತ್ತೂರು :ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿ ಖಂಡಿಸಿ ಹಿಂದೂ ಜಾಗರಣ ವೇದಿಕೆಯ ಆಶ್ರಯದಲ್ಲಿ ಜು. 7 ರಂದು ಸಂಜೆ ದರ್ಬೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ನಿಂದನಾತ್ಮಕ ಪದ ಬಳಸಿರುವುದರ ವಿರುದ್ಧ ಪುತ್ತೂರು ನಗರ ಠಾಣೆಗೆ ಪುತ್ತೂರು ಕಾಂಗ್ರೇಸ್ ವತಿಯಿಂದ ದೂರು ನೀಡಲಾಗಿದೆ.
ಭಾಷಣಕಾರ ಅಜಿತ್ ಮಡಿಕೇರಿ, ಇಲ್ಲೊಬ್ಬ ಶಾಸಕ ಹಿಂದೂ ಸಂಘಟನೆಯನ್ನು ಗೇಲಿ ಮಾಡುತ್ತಿದ್ದಾನೆ, ಹೋರಾಟ ಮಾಡುವವರು ಬಾಲ ಮುದುಡಿ ಕುಳಿತುಕೊಂಡಿದ್ದಾರೆ ಎನ್ನುತ್ತಾನೆ, ನಿನ್ನಂತಹ ಅಯೋಗ್ಯ ಶಾಸಕರನ್ನು ಜಿಲ್ಲೆಯ ಜನ ಎಷ್ಟೊ ನೋಡಿ ಆಗಿದೆ. ಈ ಪೊಳ್ಳು ಬೆದರಿಕೆಗಳಿಗೆ ಹೆದರುವ ಮಕ್ಕಳು ನಾವಲ್ಲ ಎಂದಿದ್ದಾರೆ.ನಾಳೆ ಕಾಶ್ಮೀರದಲ್ಲಿ ಆದ ಘಟನೆಗಳು ಜಿಲ್ಲೆಯಲ್ಲಿ ನಡೆದರೆ ನಿನ್ನ ಗುಲಾಮರು ನಿಮ್ಮ ಜೊತೆ ನಿಲ್ಲೋದಿಲ್ಲ ಎಂದಿದ್ದಾರೆ
ಈ ಭಾಷಣಕಾರ ಹಾಗೂ ಕೋಮುದ್ವೇಷ ಭಾಷಣ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪುತ್ತೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.






