
ಪುತ್ತೂರು: ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈಯವರು ಹಿಂದು ಸಂಘಟನೆಗಳ ಪ್ರಮುಖರನ್ನು ಉದ್ದೇಶಿಸಿ ಸಾರ್ವಜನಿಕವಾಗಿ ನಿಂದಿಸಿ, ಅವಮಾನಕರ ರೀತಿಯಲ್ಲಿ ಪ್ರಚೋದನಕಾರಿಯಾಗಿ ಹೇಳಿಕೆಯನ್ನು ನೀಡಿದ್ದಾರೆಂದು ಆರೋಪಿಸಿ ಹಿಂದು ಜಾಗರಣ ವೇದಿಕೆಯಿಂದ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ದ.ಕ. ಜಿಲ್ಲೆಯಲ್ಲಿ ನೂತನ ಎಸ್ಪಿಯವರು ಮತ್ತು ಕಮಿಷನರ್ ಅವರು ಅಧಿಕಾರ ವಹಿಸಿಕೊಂಡ ನಂತರ ಎಲ್ಲವೂ ಶಾಂತಿಯುತವಾಗಿ ಸಾರ್ವಜನಿಕ ವಲಯದಲ್ಲಿ ಭಯಮುಕ್ತವಾಗಿತ್ತು. ಇದೆಲ್ಲದರ ಮಧ್ಯೆ ಪುತ್ತೂರು ತಾಲೂಕಿನ ಶಾಸಕ ಅಶೋಕ್ ಕುಮಾರ್ ರೈಯವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿ ಹೊಸ ಎಸ್ಪಿಯವರು ಮತ್ತು ಕಮಿಷನರ್ ಬಂದ ನಂತರ ಪರಿವಾರ ಸಂಘಟನೆಗಳು ಪ್ರಮುಖರನ್ನು ಪೋಲಿಸ್ ಇಲಾಖೆ ಬೆತ್ತಲೆ ಮಾಡಿ ಚಡ್ಡಿಯಲ್ಲಿ ನಿಲ್ಲಿಸಿ ಫೋಟೋವನ್ನು ತೆಗೆದುಕೊಂಡು ಹೋಗಿದ್ದಾರೆ.
ಮುಂದಿನ ದಿನಗಳಲ್ಲಿ ಪ್ಲೇಟು ಕೊಟ್ಟು ಕೂರಿಸುತ್ತಾರೆ ಎಂದು ಉಪ್ಪಿನಂಗಡಿಯ ೩೪ ನೆಕ್ಕಿಲಾಡಿ ಎಂಬಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಹಳ ಅವಮಾನಕರ ರೀತಿಯಲ್ಲಿ ಲೇವಡಿ ಮಾಡಿರುತ್ತಾರೆ.






