ಜೂನ್‌ನಲ್ಲಿ ಹೈಡ್ರಾಲಿಕ್ ಫೇಲ್ ಆಗಿ ಕೇರಳದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಬ್ರಿಟಿಷ್ ರಾಯಲ್ ನೇವಿಯ F-35B ಫೈಟರ್ ಜೆಟ್ನ್ನು ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ತಿಂಗಳಿನಿಂದ ನಿಲ್ಲಿಸಲಾಗಿದೆ.

ಯುದ್ಧವಿಮಾನ ತುರ್ತು ಭೂಸ್ಪರ್ಶ ಮಾಡಿದ ಮೂರು ವಾರಗಳ ನಂತರ, ಜುಲೈ 6 ರಂದು ಎಂಜಿನಿಯರಿಂಗ್ ಹೈಡ್ರಾಲಿಕ್ ಸ್ನ್ಯಾಗ್ ಸರಿಪಡಿಸಲು ಫೈಟರ್ ಜೆಟ್ನ್ನು ಹ್ಯಾಂಗರ್‌ಗೆ ಎಳೆದುಕೊಂಡು ಹೋಗಿದ್ದರು.

ಬ್ರಿಟಿಷ್ ಸಿಬ್ಬಂದಿ ವಿಮಾನದ ಬಾನೆಟ್ ಮೇಲೆ ಹತ್ತಿ ಸರಿಪಡಿಸಲು ಯತ್ನಿಸುತ್ತಿದ್ದಾರೆ. ಆದರೂ, ಫೈಟರ್ ಜೆಟ್ ಹಾರುತ್ತಿಲ್ವಂತೆ.

ಕಳೆದ ಒಂದು ತಿಂಗಳಿನಿಂದ, F35 ಜೆಟ್‌ನ ಹೈಡ್ರಾಲಿಕ್ ಸ್ನ್ಯಾಗ್ ಸರಿಪಡಿಸಲು ಹಲವಾರು ಪ್ರಯತ್ನ ಮಾಡಲಾಗಿದೆ. ಆದರೆ, ಫಲ ಸಿಕ್ಕಿಲ್ಲ. ಅದೇ ಕಾರಣಕ್ಕೆ ಕೇರಳದಲ್ಲೇ ಬ್ರಿಟಿಷ್ ಯುದ್ಧ ವಿಮಾನ ನಿಂತಿದೆ. ಕಳೆದ ಭಾನುವಾರ, UK ಯಿಂದ ಬ್ರಿಟಿಷ್ ರಾಯಲ್ ಏರ್ ಫೋರ್ಸ್‌ನ 14 ತಾಂತ್ರಿಕ ತಜ್ಞರು ಮತ್ತು 10 ಸಿಬ್ಬಂದಿ ಬಂದಿದ್ದರು. ಫೈಟರ್ ಜೆಟ್ನ್ನು ಸ್ಥಳೀಯವಾಗಿ ದುರಸ್ತಿ ಮಾಡಬಹುದಾ ಎಂದು ಪರಿಶೀಲಿಸಿದ್ದರು.

ಭಾರತವು F-35 ಯುದ್ಧವಿಮಾನ ಬಳಸೋದಿಲ್ಲ. ಆದ್ದರಿಂದ ವಿಮಾನವನ್ನು ಹ್ಯಾಂಗರ್‌ಗೆ ಸ್ಥಳಾಂತರಿಸಲು ವಿಶೇಷ ಉಪಕರಣ ಬಳಸಬೇಕಾಯ್ತು. ಕಳೆದ ಒಂದು ವಾರದಿಂದ, ವಿಮಾನದ ದುರಸ್ತಿ ಕಾರ್ಯ ನಡೆಯುತ್ತಲೇ ಇದೆ. ವಿಮಾನ ಹ್ಯಾಂಗರ್‌ನಲ್ಲೇ ಇದ್ದು, ಬ್ರಿಟಿಷ್ ಸಿಬ್ಬಂದಿ ವಿಮಾನದ ಬಾನೆಟ್ ಮೇಲೆ ಹತ್ತಿ ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೂ ವಿಮಾನ ರಿಪೇರಿ ಆಗುತ್ತಿಲ್ಲ.

Leave a Reply

Your email address will not be published. Required fields are marked *

Join WhatsApp Group
error: Content is protected !!