ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವೆ ನಡೆದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ 22 ರನ್‌ಗಳ ರೋಚಕ ಗೆಲುವನ್ನು ಸಾಧಿಸಿ 5 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 2 – 1 ಅಂತರದಿಂದ ಮುನ್ನಡೆ ಸಾಧಿಸಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ್ದ ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 387 ರನ್‌ ಬಾರಿಸಿತು, ಇತ್ತ ಭಾರತ ಸಹ ಮೊದಲ ಇನ್ನಿಂಗ್ಸ್‌ನಲ್ಲಿ 387 ರನ್‌ ಬಾರಿಸಿತು.

ಬಳಿಕ ಇಂಗ್ಲೆಂಡ್‌ ಎರಡನೇ ಇನ್ನಿಂಗ್ಸ್‌ನಲ್ಲಿ 192 ರನ್‌ಗಳಿಗೆ ಆಲ್‌ಔಟ್‌ ಆಗಿ ಭಾರತಕ್ಕೆ 193 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಲು ಯತ್ನಿಸಿ ಕೊನೆಯ ವಿಕೆಟ್‌ವರೆಗೂ ಹೋರಾಟ ನಡೆಸಿದ ಭಾರತ 170 ರನ್‌ಗಳಿಗೆ ಆಲ್‌ಔಟ್‌ ಆಗಿದೆ.

ಇಂಗ್ಲೆಂಡ್‌ ನೀಡಿದ ಅಲ್ಪ ಮೊತ್ತದ ಗುರಿಯನ್ನು ಬೆನ್ನಟ್ಟಿದ ಭಾರತ ಆರಂಭಿಕ ಆಘಾತ ಅನುಭವಿಸಿ ಸಾಲು ಸಾಲಾಗಿ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತು. ಒಂದೆಡೆ ವಿಕೆಟ್‌ ಬೀಳುತ್ತಿದ್ದರೆ ಮತ್ತೊಂದೆಡೆ ರವೀಂದ್ರ ಜಡೇಜಾ ಏಕಾಂಗಿ ಹೋರಾಟವನ್ನು ನಡೆಸುತ್ತಿದ್ದರು. ಯಾವೊಬ್ಬ ಆಟಗಾರನೂ ಜಡೇಜಾ ಜತೆ ಕೈಜೋಡಿಸುವ ಕೆಲಸ ಮಾಡಲಿಲ್ಲ.

ಕೊನೆಯ ವಿಕೆಟ್‌ಗೆ ಜಡೇಜಾ ಜತೆ ಕೈಜೋಡಿಸಿದ ಮೊಹಮ್ಮದ್‌ ಸಿರಾಜ್‌ 30 ಎಸೆತಗಳನ್ನು ಎದುರಿಸಿ 4 ರನ್‌ ಬಾರಿಸಿದರು. ಒತ್ತಡದ ನಡುವೆಯೂ ಜಡೇಜಾಗೆ ಭರ್ಜರಿ ಬೆಂಬಲ ಕೊಡುತ್ತಿದ್ದ ಸಿರಾಜ್‌ ಬಷೀರ್‌ ಎಸೆದ ಎಸೆತವನ್ನು ಸಮರ್ಥನಾಗಿ ತಡೆದರೂ ಸಹ ಬ್ಯಾಟ್‌ ತಾಗಿ ಬಿದ್ದ ಚೆಂಡು ಉರುಳಿಕೊಂಡು ಹೋಗಿ ವಿಕೆಟ್‌ಗೆ ಬಡಿದಿದೆ. ಹೀಗೆ ವಿಚಿತ್ರವಾಗಿ ಸಿರಾಜ್‌ ಔಟ್‌ ಆಗುವ ಮೂಲಕ ಭಾರತ ರೋಚಕ ಹಣಾಹಣಿಯಲ್ಲಿ ಸೋಲನ್ನು ಕಂಡಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!