ಪುತ್ತೂರು: ಪುತ್ತೂರಿನಲ್ಲಿ ತಾಂತ್ರಿಕ ಸೇವಾ ಕ್ಷೇತ್ರದಲ್ಲಿ ತನ್ನದೇ ಆದ ವಿಭಿನ್ನ ಗುರುತನ್ನು ಹೊಂದಿರುವ ಪಿಕ್ಸೆಲ್ ಸಂಸ್ಥೆ, ಇಂದು ಯಶಸ್ವಿಯಾಗಿ 8ನೇ ವರ್ಷಕ್ಕೆ ಕಾಲಿಟ್ಟಿದೆ.

ಪ್ರಜ್ವಲ್ ಪುತ್ತೂರು ಅವರ ಮಾಲಕತ್ವದಲ್ಲಿ 2017ರಿಂದ ಸೇವೆ ನೀಡುತ್ತಿರುವ ಪಿಕ್ಸೆಲ್ ಸಂಸ್ಥೆ, ಎಲ್‌ಇಡಿ ವಿಡಿಯೋ ವಾಲ್, ಟಿವಿ, ಪ್ರೊಜೆಕ್ಟರ್, ವಿಡಿಯೋಗ್ರಾಫಿ, ಮಾಧ್ಯಮ ನೇರ ಪ್ರಸಾರಕ್ಕೆ ಸಂಬಂಧಿಸಿದ ತಾಂತ್ರಿಕ ವ್ಯವಸ್ಥೆ ಹಾಗೂ ಲೈವ್ ವೀಡಿಯೊ ಮಿಕ್ಸಿಂಗ್ ಸೇವೆಗಳಲ್ಲಿ ಉತ್ತಮ ಗುಣಮಟ್ಟದ ಪರಿಹಾರವನ್ನು ಗ್ರಾಹಕರಿಗೆ ಒದಗಿಸುತ್ತಿದೆ.

ಸಹ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ ಪಿಕ್ಸೆಲ್ ಟೆಕ್ ಸೊಲ್ಯೂಷನ್ಸ್ ಮುಖಾಂತರ ಮಿಂಚು ಬಂಧಕ ಅಳವಡಿಕೆಯಲ್ಲಿ ಸಂಯೋಜಿತ ರಕ್ಷಣಾ ವಿಧಾನಗಳೊಂದಿಗೆ ಮನೆ, ಕಚೇರಿ, ಕೈಗಾರಿಕೆಗಳಿಗಾಗಿ ‘ಕಿಮೆಕಲ್ ಆರ್ಥಿಂಗ್’ ಮೂಲಕ ಕಡಿಮೆ ವೆಚ್ಚದ, ಪರಿಣಾಮಕಾರಿ ಮತ್ತು ಶಾಶ್ವತ ತಾಂತ್ರಿಕ ಪರಿಹಾರ ನೀಡಲಾಗುತ್ತಿದೆ.

ಗ್ರಾಹಕರ ಬೆಂಬಲ ಹಾಗೂ ಹಿತೈಷಿಗಳ ಆಶೀರ್ವಾದದ ಫಲವಾಗಿ 8ನೇ ವರ್ಷವನ್ನು ಯಶಸ್ವಿಯಾಗಿ ಮೆರೆದಿರುವ ಸಂಸ್ಥೆ, ಮುಂದಿನ ದಿನಗಳಲ್ಲಿ ಹೆಚ್ಚು ಸುಧಾರಿತ ತಂತ್ರಜ್ಞಾನದಿಂದ ಸೇವೆ ವಿಸ್ತರಿಸುವ ಸಂಕಲ್ಪದಲ್ಲಿದೆ.

ಪಿಕ್ಸೆಲ್ ಕ್ರಿಯೇಟಿವ್ಸ್ ಮತ್ತು ಪಿಕ್ಸೆಲ್ ಟೆಕ್ ಸೊಲ್ಯೂಷನ್ಸ್,
ಪುತ್ತೂರು
📞 +91 88618 38180

Leave a Reply

Your email address will not be published. Required fields are marked *

Join WhatsApp Group
error: Content is protected !!