ಮಂಗಳೂರು : ಮಂಗಳೂರಿನಲ್ಲಿ ಮೊದಲ ಬಾರಿಗೆ ಯಶಸ್ವಿ ‘ರೀಕ್ಷೇಮ್ ರಿವಿಷನ್ ಹಿಪ್ ಸಿಸ್ಟೆಮ್ ಇಂಪ್ಲಾನ್‌ಟೇಶನ್ (ಸೊಂಟದ ಕೀಲು ಬದಲಾವಣೆ) ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಕೆಎಂಸಿ ಆಸ್ಪತ್ರೆ ಆರ್ಥೋಪೆಡಿಕ್ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ.

ತೀವ್ರವಾದ ಸೊಂಟದ ಕೀಲು ಮುರಿತಕ್ಕೆ ಒಳಗಾಗಿದ್ದ ಮಹಿಳೆಗೆ ‘ಕೀಲು ಬದಲಾಯಿಸುವ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಕೆಎಂಸಿ ಆಸ್ಪತ್ರೆ ಯ ಕನ್ಸಲೈಂಟ್ ಆರ್ಥೋಪೆಡಿಕ್ ಡಾ. ವಿಕ್ರಮ್ ಜಿ ಕೆ ಭಟ್, ಕನ್ಸಲೆಂಟ್ ಆರ್ಥೋಪೆಡಿಕ್ ಸುಧೀಂದ್ರ ಕೆ ಮತ್ತು ಅರವಳಿಕೆ ತಜ್ಞೆ ಡಾ ಶಿಲ್ಪಾ ಜಿ ಕೆ ಭಟ್ ಒಳಗೊಂಡ ತಜ್ಞ ವೈದ್ಯರ ತಂಡ ಯಶಸ್ವಿಯಾಗಿ ನಡೆಸಿದೆ.

ಚಿಕಿತ್ಸೆ ಹೇಗೆ?

85 ವರ್ಷದ ಜಯಾ (ಹೆಸರು ಬದಲಾವಣೆ) ಸೊಂಟದ ಕೀಲಿನ ಮುರಿತದಿಂದ ಸಾಕಷ್ಟು ನೋವು ಅನುಭವಿಸುತ್ತಿದ್ದು ನಡೆಯಲು ಕೂಡ ಅಸಾಧ್ಯವಾಗಿತ್ತು. ಕೆಎಂಸಿ ಆಸ್ಪತ್ರೆಯಲ್ಲಿ ವೈದ್ಯರು ರೋಗಿಯ ಸಂಪೂರ್ಣ ಪರೀಕ್ಷೆ ನಡೆಸಿದಾಗ ಅವರ ವಯಸ್ಸು, ಆರೋಗ್ಯದ ಮಾಹಿತಿಯನ್ನು ಪರಿಗಣಿಸಿ ರೀಕ್ಷೇಮ್ ರಿವಿಶನ್ ಹಿಪ್ ಸಿಸ್ಟೆಮ್ ಶಸ್ತ್ರಚಿಕಿತ್ಸೆ ಸೂಕ್ತ ಎಂದು ನಿರ್ಧರಿಸಲಾಯಿತು. ಈ ಚಿಕಿತ್ಸೆಯಲ್ಲಿ ಮುರಿತಕ್ಕೊಳಗಾದ ಮೂಳೆಯ ಭಾಗವನ್ನು ಬೈಪಾಸ್ ಮಾಡಿ ಕೃತಕ ಕೀಲು ರೀತಿಯ ವಿಶೇಷ ಇಂಪ್ಲಾಂಟ್‌ನ್ನು ಅಳವಡಿಸಲಾಗುತ್ತದೆ.

ಶಸ್ತ್ರಚಿಕಿತ್ಸೆ ಕುರಿತು ಮಾತನಾಡಿದ ಡಾ. ವಿಕ್ರಮ್ ಜಿ ಕೆ ಭಟ್” ಹಿರಿಯ ವಯಸ್ಸಿನ ವ್ಯಕ್ತಿಗಳಲ್ಲಿ ಈ ರೀತಿಯ ಸೊಂಟದ ಕೀಲು ಮುರಿತಕ್ಕೊಳಗಾದಾಗ ಚಿಕಿತ್ಸೆ ನೀಡುವುದು ಬಹಳ ಸವಾಲಿನದ್ದಾಗಿರುತ್ತದೆ. ಮೂಳೆಯ ಗುಣಮಟ್ಟದ ಜೊತೆಗೆ ಚಿಕಿತ್ಸೆಯ ನಂತರ ಚೇತರಿಕೆಯಲ್ಲಿ ಕೂಡ ಸಮಸ್ಯೆ ಕಂಡುಬರುತ್ತದೆ. ಈ ಪ್ರಕರಣದಲ್ಲಿ ಸಾಂಪ್ರದಾಯಿಕ ವಿಧಾನ ಅನುಸರಿಸಿದ್ದಲ್ಲಿ ರೋಗಿಗೆ ನಡೆದಾಡುವ ಹಂತ ತಲುಪುವಲ್ಲಿ ವಿಳಂಬ ಹಾಗೂ ಕೆಲ ತೊಡಕುಗಳು ಉಂಟಾಗುವ ಸಂಭವವೂ ಇರುತ್ತಿತ್ತು. ಹೀಗಾಗಿ ರೀಕ್ಷೇಮ್ ರಿವಿಶನ್ ಹಿಪ್ ಸಿಸ್ಟೆಮ್ ವಿಧಾನವನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಈ ಮೂಲಕ ಮುರಿತಕ್ಕೊಳಗಾದ ಭಾಗವನ್ನು ಬೈಪಾಸ್ ಮಾಡಿದ್ದು ಶಸ್ತ್ರಚಿಕಿತ್ಸೆ ಬಳಿಕ ತಕ್ಷಣ ರೋಗಿಯು ನಡೆದಾಡುವಂತೆ ಮಾಡಲಾಗಿದೆ” ಎಂದರು.

ರೋಗಿಯು ಚೇತರಿಸಿಕೊಳ್ಳುತ್ತಿದ್ದು, ಫಿಸಿಯೋಥೆರಪಿಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಜೊತೆಗೆ ಯಾರದ್ದೂ ಬೆಂಬಲವಿಲ್ಲದೇ ಸ್ವತಃ ನಡೆದಾಡುತ್ತಿದ್ದಾರೆ.

ಈ ಯಶಸ್ಸಿನ ಬಗ್ಗೆ ಮಾತನಾಡಿದ ಡಾ. ಬಿ ಆರ್ ಅಂಬೇಡ್ಕರ್ ವೃತ್ತದ ಕೆಎಂಸಿ ಆಸ್ಪತ್ರೆಯ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಾಫೀರ್ ಸಿದ್ದೀಕಿ ” ಕೆಎಂಸಿ ಆಸ್ಪತ್ರೆಯಲ್ಲಿ ನಿರಂತರ ನಾವೀನ್ಯತೆ ಹಾಗೂ ರೋಗಿ ಕೇಂದ್ರಿತ ಸೇವೆ ಮೂಲಕ ಮೆಡಿಕಲ್ ಎಕ್ಸೆಲೆನ್ಸಿಯನ್ನು ಸಾಧಿಸಲು ಬದ್ಧವಾಗಿದ್ದೇವೆ. ಮಂಗಳೂರಿನ ಮೊದಲ ರಿಕೇಮ್ ರಿವಿಶನ್ ಹಿಪ್ ಸಿಸ್ಟೆಮ್ ಯಶಸ್ವಿ ಅಳವಡಿಕೆಯು ನಮ್ಮ ಚಿಕಿತ್ಸಾ ಗುಣಮಟ್ಟ ಹಾಗೂ ವೈದ್ಯರ ತಂಡದ ಬದ್ಧತೆಗೆ ಸಾಕ್ಷಿಯಾಗಿದೆ ” ಎಂದರು.

ಈ ಪ್ರಕರಣವು ಹಿರಿಯ ವಯಸ್ಸಿನ ರೋಗಿಗಳ ಅಗತ್ಯತೆಗೆ ಅನುಗುಣವಾಗಿ ಮುಂದುವರೆದ (ಅಡ್ಯಾನ್ಸ್) ಆರ್ಥೋಪೆಡಿಕ್ ಸೇವೆಯನ್ನು ನೀಡುವ ಕೆಎಂಸಿ ಆಸ್ಪತ್ರೆಯ ಬದ್ಧತೆಗೆ ಹಿಡಿದ ಕನ್ನಡಿಯಾಗಿದೆ.

ಮಣಿಪಾಲ್ ಆಸ್ಪತ್ರೆಗಳ ಬಗ್ಗೆ

ಆರೋಗ್ಯ ಕ್ಷೇತ್ರದಲ್ಲಿ ಪ್ರವರ್ತಕರಾಗಿರುವ ಮಣಿಪಾಲ್ ಆಸ್ಪತ್ರೆಗಳು ಭಾರತದಲ್ಲಿ 70+ ವರ್ಷಗಳ ಅನುಭವ ಹೊಂದಿರುವ ಉನ್ನತ ಆರೋಗ್ಯ ಸೇವೆ ಒದಗಿಸುವವರಲ್ಲಿ ಒಂದಾಗಿದೆ, ವಾರ್ಷಿಕವಾಗಿ 7 ಮಿಲಿಯನ್ ರೋಗಿಗಳಿಗೆ ಮತ್ತು ಇಲ್ಲಿಯವರೆಗೆ 60 ಮಿಲಿಯನ್ ರೋಗಿಗಳಿಗೆ ಸೇವೆ ಸಲ್ಲಿಸುತ್ತಿದೆ. ಇದರ ಮಲ್ಟಿಸ್ಪೆಷಾಲಿಟಿ ಮತ್ತು ತೃತೀಯ ಹಂತದ ಆರೈಕೆ ವಿತರಣಾ ವರ್ಣಪಟಲದ ಮೂಲಕ ಕೈಗೆಟುಕುವ, ಉತ್ತಮ-ಗುಣಮಟ್ಟದ ಆರೋಗ್ಯ ರಕ್ಷಣಾ ಚೌಕಟ್ಟನ್ನು ಅಭಿವೃದ್ಧಿಪಡಿಸುವುದು ಮತ್ತು ಅದನ್ನು ಆಸ್ಪತ್ರೆಯ ಹೊರಗಿನ ಆರೈಕೆಗೆ ಮತ್ತಷ್ಟು ವಿಸ್ತರಿಸುವುದು ಇದರ ಗಮನ. ಮೆಡಿಕಾ ಸಿನರ್ಜಿ ಆಸ್ಪತ್ರೆಗಳು ಮತ್ತು AMRI ಆಸ್ಪತ್ರೆಗಳು ಲಿಮಿಟೆಡ್ (ಸೆಪ್ಟೆಂಬರ್ 2023 ರಲ್ಲಿ ಸ್ವಾಧೀನಪಡಿಸಿಕೊಂಡಿತು) ಸ್ವಾಧೀನ ಪೂರ್ಣಗೊಂಡ ನಂತರ, ಸಂಯೋಜಿತ ಜಾಲವು ಇಂದು 19 ನಗರಗಳಲ್ಲಿ 38 ಆಸ್ಪತ್ರೆಗಳ ಪ್ಯಾನ್-ಇಂಡಿಯಾ ಹೆಜ್ಜೆಗುರುತನ್ನು ಹೊಂದಿದ್ದು, 10500+ ಹಾಸಿಗೆಗಳು, 7200+ ವೈದ್ಯರ ಪ್ರತಿಭಾನ್ವಿತ ಪೂಲ್ ಮತ್ತು 18,600 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.

ಮಣಿಪಾಲ್ ಆಸ್ಪತ್ರೆಗಳು ಪ್ರಪಂಚದಾದ್ಯಂತದ ಅನೇಕ ರೋಗಿಗಳಿಗೆ ಸಮಗ್ರ ಗುಣಪಡಿಸುವ ಮತ್ತು ತಡೆಗಟ್ಟುವ ಆರೈಕೆಯನ್ನು ಒದಗಿಸುತ್ತವೆ. ಮಣಿಪಾಲ್ ಆಸ್ಪತ್ರೆಗಳು NABH ಮತ್ತು AAHRPP ಮಾನ್ಯತೆ ಪಡೆದಿವೆ, ಮತ್ತು ಅದರ ಜಾಲದಲ್ಲಿರುವ ಹೆಚ್ಚಿನ ಆಸ್ಪತ್ರೆಗಳು NABL, ER ಮತ್ತು ರಕ್ತ ಬ್ಯಾಂಕ್ ಮಾನ್ಯತೆ ಪಡೆದಿವೆ ಮತ್ತು ನರ್ಸಿಂಗ್ ಶ್ರೇಷ್ಠತೆಗಾಗಿ ಗುರುತಿಸಲ್ಪಟ್ಟಿವೆ. ವಿವಿಧ ಗ್ರಾಹಕ ಸಮೀಕ್ಷೆಗಳ ಮೂಲಕ ಮಣಿಪಾಲ್ ಆಸ್ಪತ್ರೆಗಳು ಭಾರತದ ಅತ್ಯಂತ ಗೌರವಾನ್ವಿತ ಮತ್ತು ರೋಗಿಗಳು ಶಿಫಾರಸು ಮಾಡುವ ಆಸ್ಪತ್ರೆ ಎಂದು ಗುರುತಿಸಲ್ಪಟ್ಟಿವೆ

Leave a Reply

Your email address will not be published. Required fields are marked *

Join WhatsApp Group
error: Content is protected !!