ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕುಡೆಂಬಿಯಲ್ಲಿ ಹಾವು ಕಚ್ಚಿದ ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರು ಕುಡೆಂಬಿ ಕುತ್ತಿಮುಂಡ ಶಾಂತಪ್ಪ ಅವರ ಪತ್ನಿ ರಾಧಮ್ಮ ಎಂದು ಗುರುತಿಸಲಾಗಿದೆ.

ಮಾಹಿತಿ ಪ್ರಕಾರ, ರಾಧಮ್ಮ ಅವರು ಸ್ನಾನಕ್ಕೆ ನೀರು ಕಾಯಿಸಲು ತೆಂಗಿನ ಕಾಯಿ ಸಿಪ್ಪೆ ರಾಶಿಗೆ ಬೆಂಕಿ ಹಚ್ಚುತ್ತಿದ್ದ ವೇಳೆ ಅದರೊಳಗೆ ಅಡಗಿದ್ದ ಹಾವು ಕಚ್ಚಿದೆ. ಆ ವೇಳೆ ಮನೆಯಲ್ಲಿ ಅವರ ಅತ್ತೆ ಮಾತ್ರ ಇದ್ದರು. ತಕ್ಷಣ ಸ್ಥಳೀಯರಿಗೆ ವಿಷಯ ತಿಳಿಸಲಾಗಿದ್ದು, ನಂತರ ಅವರನ್ನು ಸುಳ್ಯ ಕೆ.ವಿ.ಜಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಅವರು ಮೃತಪಟ್ಟಿರುವುದು ವೈದ್ಯರ ಪರಿಶೀಲನೆಯಲ್ಲಿ ದೃಢಪಟ್ಟಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!