ಬೆಳ್ತಂಗಡಿ ಹಾಗೂ ಸುತ್ತಮುತ್ತಲಿನ ಪೊಲೀಸ್ ಠಾಣೆಗಳಲ್ಲಿ ಕಳೆದ ಎರಡು ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡುವ, ಅಶ್ಲೀಲ ಹಾಗೂ ದುಷ್ಪ್ರೇರಣೆಯ ಸಂದೇಶಗಳನ್ನು ಹಂಚಿದ ಹಿನ್ನೆಲೆಯಲ್ಲಿ ಒಟ್ಟು ಆರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
1. ಜೈನ ಧರ್ಮ ಅವಮಾನ ಪ್ರಕರಣ – ಹುಬ್ಬಳ್ಳಿ ಮೂಲದ ಅಜಿತ್ ಬಸಾಪುರ್ ಅವರ ದೂರಿನ ಮೇರೆಗೆ, ಗಿರೀಶ್ ಮಟ್ಟೆಣ್ಣ ಎಂಬಾತನು ‘ಕುಡ್ಲ ರಾಂಪೇಜ್’ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಜೈನ ಧರ್ಮೀಯರ ಭಾವನೆಗೆ ಧಕ್ಕೆ ತರುವ ಹೇಳಿಕೆ ನೀಡಿದ್ದು, ಚಾನೆಲ್ ಮಾಲೀಕನು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ ಪ್ರಕರಣ (ಅಕ್ರ: 86/2025).
2. ಫೇಸ್ಬುಕ್‌ನಲ್ಲಿ ಅಶ್ಲೀಲ ಸಂದೇಶ – ವಿಜಯ (41) ಎಂಬವರ ದೂರಿನ ಮೇರೆಗೆ, “ವಿಕಾಸ್ ವಿಕ್ಕಿ ಹಿಂದೂ” ಖಾತೆಯಲ್ಲಿ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಅಶ್ಲೀಲ ಪೋಸ್ಟ್ (ಅಕ್ರ: 71/2025).
3. ಫೇಸ್ಬುಕ್‌ನಲ್ಲಿ ಅವಹೇಳನಕಾರಿ ಕಾಮೆಂಟ್ – ಧನಂಜಯ ಜೈನ್ (47) ಅವರ ದೂರಿನ ಮೇರೆಗೆ, “ಏನ್ರಿ ಗೌಡ್ರೆ” ಖಾತೆಯಲ್ಲಿ ಅಶ್ಲೀಲ ಪದ ಬಳಕೆ (ಅಕ್ರ: 72/2025).
4. ಧರ್ಮಸ್ಥಳ ಉತ್ಖನನ ಕುರಿತ ದುಷ್ಪ್ರೇರಣೆ – ಪ್ರಭಾಕರ ಗೌಡ (51) ಅವರ ದೂರಿನ ಮೇರೆಗೆ, “ಲಾಯರ್ ಜಗದೀಶ್” ಫೇಸ್ಬುಕ್‌ನಲ್ಲಿ ಮಾರಕ ಆಯುಧ ಬಳಕೆಗೆ ಪ್ರೋತ್ಸಾಹಿಸುವ ವಿಡಿಯೋ (ಅಕ್ರ: 88/2025).
5. ಕೋಟಿ ಚೆನ್ನಯ ಕುರಿತ ವೈಮನಸ್ಸು ಪ್ರಚೋದನೆ – ಪ್ರಭಾಕರ ಗೌಡ ಅವರ ಮತ್ತೊಂದು ದೂರಿನ ಮೇರೆಗೆ, “ಲೊಕೇಶ್ ಪೂಜಾರಿ” ಫೇಸ್ಬುಕ್‌ನಲ್ಲಿ ಎರಡು ಸಮುದಾಯಗಳ ನಡುವೆ ದ್ವೇಷ ಹುಟ್ಟಿಸುವ ಸುಳ್ಳು ಸಂದೇಶ (ಅಕ್ರ: 89/2025).
6. ಯೂಟ್ಯೂಬ್ ಮೂಲಕ ದುಷ್ಪ್ರೇರಣೆ – ಉದಯ ಪೂಜಾರಿ (41) ಅವರ ದೂರಿನ ಮೇರೆಗೆ, ನವೀನ್ ಜೈನ್ ಅಕ್ರಮ ಕೂಟ, ಶಾಂತಿ ಭಂಗಕ್ಕೆ ಪ್ರೇರೇಪಿಸುವ ವಿಡಿಯೋ ಪ್ರಸಾರ (ಅಕ್ರ: 91/2025).
ಪೊಲೀಸರು ಸಂಬಂಧಿಸಿದ ಎಲ್ಲಾ ಪ್ರಕರಣಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.







