
ಪುತ್ತೂರು: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ.), ಪುತ್ತೂರು 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ, ಆಗಸ್ಟ್ 14ರಂದು ಸುಭದ್ರದ ಬಳಿ ಇರುವ ಟ್ರಸ್ಟ್ ಕೇಂದ್ರ ಕಚೇರಿಯಲ್ಲಿ ನಡೆಯಿತು. ಸಭೆಯನ್ನು ಟ್ರಸ್ಟ್ ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ ಅವರ ಉಪಸ್ಥಿತಿಯಲ್ಲಿ, ಪ್ರಸ್ತುತ ಅಧ್ಯಕ್ಷ ಮಹೇಂದ್ರ ವರ್ಮ ಬಜತ್ತೂರು ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ನೂತನ ಅಧ್ಯಕ್ಷರಾಗಿ ರಾಮ್ ಭಟ್ ಪಾತಾಳ, ಪ್ರಧಾನ ಕಾರ್ಯದರ್ಶಿಯಾಗಿ ಪ್ರೇಮ್ ರಾಜ್ ಅರ್ಲಪದವು ಹಾಗೂ ಕೋಶಾಧಿಕಾರಿಯಾಗಿ ರೂಪೇಶ್ ಟಿ. ಪುತ್ತೂರು ಅವರನ್ನು ನಿರ್ದೇಶಕರ ಸಮ್ಮುಖದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಟ್ರಸ್ಟ್ ಗೌರವಾಧ್ಯಕ್ಷ ಚಂದಪ್ಪ ಮೂಲ್ಯ, ಮಾಜಿ ಅಧ್ಯಕ್ಷ ಪ್ರಸನ್ನ ಮಾರ್ತ, ಮಾಜಿ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಕೋಶಾಧಿಕಾರಿ ಗಣೇಶ್ ಚಂದ್ರ ಭಟ್ ಮಕರಂದ, ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ಕೆದಂಬಾಡಿ ಮಠ ಸೇರಿದಂತೆ ಗೌರವ ಸಲಹೆಗಾರರು, ಉಪಾಧ್ಯಕ್ಷರು ಹಾಗೂ ಎಲ್ಲಾ ನಿರ್ದೇಶಕರು ಹಾಜರಿದ್ದರು.
2024-25ನೇ ಸಾಲಿನಲ್ಲಿ ಟ್ರಸ್ಟ್ ಮುನ್ನಡೆಸಿದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಮತ್ತು ಕೋಶಾಧಿಕಾರಿಗಳಿಗೆ ಒಂದು ವರ್ಷದ ಅವಿಸ್ಮರಣೀಯ ಸೇವೆಗೆ ಸಂಚಾಲಕರು ಶಾಲು ಹಾಕಿ ಗೌರವಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ರವಿಕುಮಾರ್ ರೈ ಸ್ವಾಗತ ಭಾಷಣ ಮಾಡಿದರು. ಮಾಧ್ಯಮ ಪ್ರಮುಖ ನವೀನ್ ರೈ ಪಂಜಲ ಧನ್ಯವಾದ ಸಲ್ಲಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.






