
ಬಂಟ್ವಾಳ: ಬಂಟ್ವಾಳ ತಾಲೂಕಿನ ಗಡಿಯಾರ ಜೋಗಿಬೆಟ್ಟು ಐಎಂಸಿ ಸಂಘಟನೆಯ ನೇತೃತ್ವದಲ್ಲಿ, ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸುವ ಪುರಸ್ಕಾರ ಸಮಾರಂಭವು ಶುಕ್ರವಾರ ಗಡಿಯಾರ ಜುಮಾ ಮಸೀದಿ ಆವರಣದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಉತ್ತಮ ಅಂಕಗಳನ್ನು ಪಡೆದ ದುಲ್ಖತ್ಹುಲ್ ಅಫೀಫಾ (617 ಅಂಕ), ಮುಹಮ್ಮದ್ ಶಬೀರ್ ಕೆ (590 ಅಂಕ), ಮುಹಮ್ಮದ್ ರಾಫಿ (566 ಅಂಕ), ಮುಹಮ್ಮದ್ ನಿಹಾಲ್ (560 ಅಂಕ), ಮರಿಯಂ ರಾಯಿದ್ (549 ಅಂಕ) ಅವರನ್ನು ಪೋಷಕರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಎಂಜೆಎಂ ಅಧ್ಯಕ್ಷ ರಿಯಾಝ್ ಕಲ್ಲಾಜೆ, ಖತೀಬರು ಮುಹಮ್ಮದಲಿ ದಾರಿಮಿ (MJM ಗಡಿಯಾರ್), ರಶೀದ್ ಸಖಾಫಿ, ಸಿರಾಜುದ್ದೀನ್ ಮದನಿ ಉಸ್ತಾದ್, ಎಂಜೆಎಂ ಕಾರ್ಯದರ್ಶಿ ಪಿ.ಕೆ. ಅಬ್ದುಲ್ ರಹ್ಮಾನ್, ಪತ್ರಕರ್ತ ಶಂಶೀರ್ ಬುಡೋಳಿ, ಐಎಂಸಿ ಅಧ್ಯಕ್ಷ ಹಾರಿಶ್, ಬಶೀರ್ ಕರಾಯ, ರಿಯಾಝ್ ವಿದ್ಯಾನಗರ ಸೇರಿದಂತೆ ಹಲವರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದರು.






