ಪುತ್ತೂರು: ನಗರದ ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ವತಿಯಿಂದ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ವಿಶೇಷ ಮಾರಾಟ ಮೇಳ ಆಯೋಜಿಸಲಾಗಿದೆ. ಆಗಸ್ಟ್ 15ರಿಂದ 23ರವರೆಗೆ ನಡೆಯುತ್ತಿರುವ ಈ ವಿಶೇಷ ಮೇಳದಲ್ಲಿ ಗ್ರಾಹಕರಿಗೆ ಚಿನ್ನ, ಬೆಳ್ಳಿ ಹಾಗೂ ವಜ್ರಾಭರಣಗಳ ಖರೀದಿಗೆ ಆಕರ್ಷಕ ರಿಯಾಯಿತಿಗಳನ್ನು ನೀಡಲಾಗುತ್ತಿದೆ.ಸಂಸ್ಥೆಯು 1957ರಿಂದ ಗುಣಮಟ್ಟ, ವಿಶ್ವಾಸ ಹಾಗೂ ವಿನೂತನ ವಿನ್ಯಾಸಗಳ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಆಯೋಜಿಸಿರುವ ವಿಶೇಷ ಮೇಳದಲ್ಲಿ ಗ್ರಾಹಕರಿಗಾಗಿ ಹಲವು ವಿಶೇಷ ಕೊಡುಗೆಗಳನ್ನು ನೀಡಲಾಗಿದೆ.ಚಿನ್ನದ ಆಭರಣಗಳ ವಿಎ (VA) ಮೇಲೆ ಪ್ರತಿ ಗ್ರಾಂಗೆ ರೂ.600ರವರೆಗೆ ರಿಯಾಯಿತಿ, ವಜ್ರಾಭರಣಗಳ ಮೇಲೆ ಪ್ರತಿ ಕ್ಯಾರೆಟ್‌ಗೆ ಫ್ಲ್ಯಾಟ್ ರೂ.7,000 ರಿಯಾಯಿತಿ ಹಾಗೂ ಬೆಳ್ಳಿ ಆಭರಣಗಳ ಮೇಲೆ ಪ್ರತಿ ಕೆ.ಜಿ.ಗೆ ಫ್ಲ್ಯಾಟ್ ರೂ.8,000 ರಿಯಾಯಿತಿ ನೀಡಲಾಗುತ್ತಿದೆ.ಜೊತೆಗೆ, ಹಳೆಯ ಚಿನ್ನಾಭರಣಗಳ ಎಕ್ಸ್‌ಚೇಂಜ್‌ಗೂ 0% ಕಡಿತದ ಸೌಲಭ್ಯ ಲಭ್ಯವಿದೆ. ಆಕರ್ಷಕ ಹಳೆಯ ಚಿನ್ನದ ಆಭರಣಗಳ ಸಂಗ್ರಹದಲ್ಲಿ 10%ರಿಂದ ಆರಂಭವಾಗುವ ವಿಶೇಷ ರಿಯಾಯಿತಿಯೊಂದಿಗೆ ಸುಂದರ ನೆಕ್ಲೆಸ್, ಹಾರ, ಚೈನ್, ಉಂಗುರ, ಬಳೆ ಸೇರಿದಂತೆ ವೈವಿಧ್ಯಮಯ ಹಾಗೂ ಮನಮೋಹಕ ಆಭರಣಗಳ ವಿಶಾಲ ಸಂಗ್ರಹ ಗ್ರಾಹಕರಿಗಾಗಿ ಲಭ್ಯವಿದೆ.ಸಂಸ್ಥೆಯ ಪುತ್ತೂರು, ಸುಳ್ಯ, ಹಾಸನ, ಕುಶಾಲನಗರ ಸೇರಿದಂತೆ ವಿವಿಧ ಮಳಿಗೆಗಳಲ್ಲಿ ಈ ವಿಶೇಷ ಆಫರ್‌ಗಳು ಲಭ್ಯವಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆ ತಿಳಿಸಿದೆ.











