
ಉಪ್ಪಿನಂಗಡಿ : ಹಲವು ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದ ನಿಜಾಮುದ್ದೀನ್ ಅಲಿಯಾಸ್ ನಿಜಾಮ್ (33) ಎಂಬಾತನನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳು ಹಾಗೂ ವಾರಂಟ್ ಜ್ಯಾರಿ ಸಿಬ್ಬಂದಿಗಳು ಖಚಿತ ಮಾಹಿತಿಯ ಮೇರೆಗೆ ಆಗಸ್ಟ್ 25ರಂದು ಉಪ್ಪಿನಂಗಡಿ ಬಳಿಯ ವಲಾಲು ಎಂಬಲ್ಲಿ ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ತಲಪಾಡಿ ನಿವಾಸಿ ನಿಜಾಮುದ್ದೀನ್, 2023ರಲ್ಲಿ ಮಂಗಳೂರು ಪೂರ್ವ ಠಾಣೆಯಲ್ಲಿ ಖೋಟಾ ನೋಟು ಪ್ರಕರಣ (ಕಲಂ 489 ಬಿ,ಸಿ, 34 ಐಪಿಸಿ) ಅಡಿಯಲ್ಲಿ ಬಂಧಿತನಾಗಿ ಜಾಮೀನು ಪಡೆದು ಹೊರಬಂದು ನಂತರ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಮಾನ್ಯ ನ್ಯಾಯಾಲಯವು ಅವನ ವಿರುದ್ಧ ಎಂಟು ಬಾರಿ ಬಂಧನ ವಾರಂಟ್ ಹೊರಡಿಸಿತ್ತು. ಕೊನೆಗೂ ಪೊಲೀಸರು ದಸ್ತಗಿರಿ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನಿಜಾಮುದ್ದೀನ್ ವಿರುದ್ಧ ದಾಖಲಾಗಿರುವ ಪ್ರಕರಣಗಳು:
1. ಮಂಗಳೂರು ಪೂರ್ವ ಪೊಲೀಸ್ ಠಾಣೆ – ಅ.ಕ್ರ 1/2023, ಕಲಂ 489(A),(B),(C), r/w 34 IPC (ಬಂಧನ ವಾರಂಟ್)
2. ಮಂಗಳೂರು ದಕ್ಷಿಣ ಪೊಲೀಸ್ ಠಾಣೆ – ಅ.ಕ್ರ 128/2022, ಕಲಂ 392, 506 r/w 34 IPC (ಬಂಧನ ವಾರಂಟ್)
3. ಮಡಿವಾಳ ಪೊಲೀಸ್ ಠಾಣೆ – ಅ.ಕ್ರ 235/2022, ಕಲಂ 489(A),(B), 420 r/w 34 IPC (ಉದ್ಘೋಷಣೆ ಹೊರಡಿಸಲಾಗಿದೆ)
4. ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆ – ಅ.ಕ್ರ 147/2016, ಕಲಂ 398, 402 IPC (ವಿಚಾರಣೆಯಲ್ಲಿದೆ)
5. ಮಂಗಳೂರು ಬರ್ಕೆ ಪೊಲೀಸ್ ಠಾಣೆ – ಅ.ಕ್ರ 93/2015, ಕಲಂ 143, 323, 324, 353, 427, 302 r/w 149 IPC (ವಿಚಾರಣೆಯಲ್ಲಿದೆ)
6. ಪುತ್ತೂರು ನಗರ ಪೊಲೀಸ್ ಠಾಣೆ – ಅ.ಕ್ರ 112/2017, ಕಲಂ 120(B), 341, 323, 307, 427 r/w 34 IPC (ವಿಚಾರಣೆಯಲ್ಲಿದೆ)
7. ವಿಟ್ಲ ಪೊಲೀಸ್ ಠಾಣೆ – ಅ.ಕ್ರ 181/2015, ಕಲಂ 143, 147, 148, 341, 324, 307, 302, 120(B) IPC (ಖುಲಾಸೆಯಾಗಿದೆ)
ಆಪಾದಿತನು ಹಲವು ಗಂಭೀರ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದು, ಖೋಟಾನೋಟು ಪ್ರಕರಣದ ಜೊತೆಗೆ ದರೋಡೆ, ಕೊಲೆ ಯತ್ನ, ಕೊಲೆ ಸೇರಿ ಹಲವು ಅಪರಾಧಗಳಲ್ಲಿ ಆರೋಪಿಯಾಗಿರುವುದು ಬೆಳಕಿಗೆ ಬಂದಿದೆ.






