
ಸುಳ್ಯ ತಾಲೂಕು ಐವರ್ನಾಡು ರಬ್ಬರ್ ಫ್ಯಾಕ್ಟರಿ ಬಳಿ ಇಂದು ದುರ್ಘಟನೆ ಸಂಭವಿಸಿದೆ. ಮನೆ ಸಮೀಪದ ಸಾರ್ವಜನಿಕ ಬಾವಿಗೆ ಹಾರಿ ಕೌಶಿಕ್ ಕುಮಾರ್ (10ನೇ ತರಗತಿ ವಿದ್ಯಾರ್ಥಿ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಪೈಚಾರ್ ಮುಳುಗು ತಜ್ಞರಾದ ಅಬ್ಬಾಸ್ ಶಾಂತಿನಗರ, ಬಶೀರ್ ಆರ್.ಬಿ ಹಾಗೂ ಅಶ್ರಫ್ ಅಚ್ಚಪ್ಪು ರವರು ಬಾವಿಗೆ ಇಳಿದು ಮೃತದೇಹವನ್ನು ಹೊರತೆಗೆದರು. ಬಳಿಕ ಮೃತದೇಹವನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.
ಸ್ಥಳಕ್ಕೆ ಬೆಳ್ಳಾರೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ವಿದ್ಯಾರ್ಥಿ ಸುಳ್ಯದ ಖಾಸಗಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದು, ತಂದೆ ವಿಜಯಕಾಂತ, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ.






