
ಪುತ್ತೂರು: ದರ್ಬೆಯ ಲಿಟ್ಲ್ ಫ್ಲವರ್ ಶಾಲೆಯಲ್ಲಿ ಶಾಲಾ ಶೈಕ್ಷಣಿಕ ಸಂಘಗಳ ಉದ್ಘಾಟನಾ ಕಾರ್ಯಕ್ರಮವು ಶಾಲಾ ಮುಖ್ಯ ಶಿಕ್ಷಕಿ ಭಗಿನಿ ವೆನಿಶಾ ಬಿ.ಎಸ್. ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ಗ್ರಾಫಿಕ್ ಡಿಸೈನರ್ ಹಾಗೂ ರಕ್ಷಕ ಶಿಕ್ಷಕ ಸಂಘದ ಸದಸ್ಯರಾದ ಶ್ರೀ ಮಂಜುನಾಥ್ ಉದ್ಘಾಟಿಸಿ ಮಾತನಾಡಿದರು. “ಜೀವನವೆಂದರೆ ಸದಾ ಗೆಲುವೇ ಅಲ್ಲ, ಅದು ಸತತ ಹೋರಾಟ. ಏನೇ ಕಾರ್ಯ ಮಾಡಿದರೂ ಅದರಲ್ಲಿ ಶ್ರದ್ದೆ ಇರಬೇಕು. ಸಾಮಾಜಿಕ ಜಾಲತಾಣವನ್ನು ಒಳಿತಿಗೆ ಬಳಸಿದರೆ ಅದ್ಭುತ ಯಶಸ್ಸು ಸಾಧ್ಯ,” ಎಂದು ಅವರು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು.
ವೇದಿಕೆಯಲ್ಲಿ ನಿಯೋಜಿತ ಮುಖ್ಯ ಶಿಕ್ಷಕಿ ಭಗಿನಿ ಐರಿನ್ ವೇಗಸ್, ಕೋಸ್ಟಲ್ ಹೋಮ್ ದರ್ಬೆಯ ಮಾಲಕರಾದ ಸಂದೇಶ್ ರೈ, ರಕ್ಷಕ ಶಿಕ್ಷಕ ಸಂಘದ ಸದಸ್ಯ ಸುಕುಮಾರ್ ಹಾಗೂ ಶಿಕ್ಷಕಿ ವಿಲ್ಮಾ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ಶಿಲ್ಪಾ ಸುರೇಶ್ ಸ್ವಾಗತಿಸಿ, ಶಿಕ್ಷಕಿ ರಮ್ಯ ವಂದಿಸಿದರು. ಶಿಕ್ಷಕಿ ಸಾತ್ವಿಕ ಕಾರ್ಯಕ್ರಮವನ್ನು ನಿರೂಪಿಸಿದರು.






