
ಪುತ್ತೂರು : ಕರ್ನಾಟಕ ಮುಸ್ಲಿಂ ಜಮಾಅತ್ ರೆಂಜ ಸರ್ಕಲ್ ವತಿಯಿಂದ 79 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ “ಸ್ವಾತಂತ್ರ್ಯ ಸೌಹಾರ್ದ ಸಂಗಮ” ಕಾರ್ಯಕ್ರಮ ಸಂಘದ ಕಛೇರಿಯಲ್ಲಿ ಭಾನುವಾರ ನಡೆಯಿತು.
ಕರ್ನಾಟಕ ಮುಸ್ಲಿಂ ಜಮಾಅತ್ ರೆಂಜ ಸರ್ಕಲ್ ಇದರ ಅಧ್ಯಕ್ಷ ಅಬ್ದುಲ್ ಕುಂಣಿಖೆ ಮಾಸ್ಟರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೆಎಂಜೆ ರೆಂಜ ಸರ್ಕಲ್ ನ ಸದಸ್ಯ ಅಬ್ಬಾಸ್ ಮದನಿ ದುಆ ನೆರವೇರಿಸಿದರು. ಕೆಎಂಜೆ ಪುತ್ತೂರು ಝೂನ್ ನ ಕೋಶಾಧಿಕಾರಿ ಅಬ್ದುಲ್ ಜಲೀಲ್ ಸಖಾಫಿ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕ, ಅಂಕಣಕಾರ, ನಾರಾಯಣ ರೈ ಕುಕ್ಕುವಳ್ಳಿ, ಕೆಎಂಜೆ ಈಸ್ಟ್ ಜಿಲ್ಲೆಯ ಮಾಧ್ಯಮ ಕಾರ್ಯದರ್ಶಿ ಅಬ್ದುಲ್ ಹಮೀದ್ ಸುಣ್ಣಮೂಲೆ, ಮುಹಮ್ಮದ್ ಕುಕ್ಕುವಳ್ಳಿ ಭಾಗವಹಿಸಿದ್ದರು.
ರೆಂಜ ಸರ್ಕಲ್ ಉಸ್ತುವಾರಿ ಹಂಝ ಲತೀಫಿ, ಕೋಶಾಧಿಕಾರಿ ಅಬ್ದುಲ್ ಮದನಿ, ಲೇಖಕ ಅಬ್ದುಲ್ ಅಝೀಝ್ ನೂರಾನಿ, ಸಂದರ್ಭೋಚಿತವಾಗಿ ಮಾತನಾಡಿದರು.
ಕೆ.ಎಂ.ಜೆ ಪ್ರಧಾನ ಕಾರ್ಯದರ್ಶಿ ಮೂಸ ಮದನಿ ಸ್ವಾಗತಿಸಿ, ಕಾರ್ಯದರ್ಶಿ ಮುಹಮ್ಮದ್ ಮದನಿ ವಂದಿಸಿದರು .






