ಪುತ್ತೂರು:ಪುತ್ತೂರು ವಿಧಾನಸಭಾ ಕ್ಷೇತ್ರದ ಜನಪ್ರೀಯ ಶಾಸಕರು ಹಾಗೂ ಅಭಿವೃದ್ಧಿಯ ಹರಿಕಾರರಾಗಿರುವ ಸನ್ಮಾನ್ಯ ಅಶೋಕ್ ಕುಮಾರ್ ರೈ ಅವರ ಜನ್ಮದಿನದ ಅಂಗವಾಗಿ ಇಂದು (02-09-2025, ಮಂಗಳವಾರ) ಬೆಳಿಗ್ಗೆ 11.00 ಗಂಟೆಗೆ ಪುತ್ತೂರಿನ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಹುಟ್ಟುಹಬ್ಬ ಆಚರಣೆ ಹಾಗೂ ಅಶಕ್ತರಿಗೆ ಸಹಾಯ ಹಸ್ತ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಈ ಸಂದರ್ಭದಲ್ಲಿ ಶ್ರೀ ಶ್ರೀ ಈಶವಿಠಲ ಸ್ವಾಮೀಜಿ, ಸಾಂದೀಪನಿ ಸಾಧನಾಶ್ರಮ, ಕೇಮಾರ್, ರೆ. ಫಾ. ಲಾರೆನ್ಸ್ ಮಸ್ಕರೇನಸ್, ಪ್ರಧಾನ ಧರ್ಮಗುರು, ಮಾಯ್ ದೆ ದೇವುಸ್ ಚರ್ಚ್, ಪುತ್ತೂರು,ಎಸ್.ಬಿ. ದಾರಿಮಿ, ಖತೀಬ್ ಜುಮಾ ಮಸ್ಜಿದ್, ಮಾಡನ್ನೂರು, ಪ್ರಕಾಶ್ ಭಂಡಾರಿ, ಅಧ್ಯಕ್ಷರು, ಚಿನ್ನರ ಬಿಂಬ ಪ್ರತಿಷ್ಠಾನ, ಮುಂಬಯಿ, ತಾಹಿರ್ ಸಾಲ್ಮರ, ಅನಿವಾಸಿ ಉದ್ಯಮಿ, ಜುಬೈಲ್ – ಸೌದಿ ಅರೇಬಿಯಾ ಹಾಗೂ ಅನೇಕ ಗಣ್ಯರು ಉಪಸ್ಥಿತರಿರಲಿದ್ದಾರೆ.

ಶಾಸಕರ ಅಭಿಮಾನಿಗಳು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅಶೋಕ್ ಕುಮಾರ್ ರೈ ಅಭಿಮಾನಿ ಬಳಗ ಮನವಿ ಮಾಡಿದೆ.

🍛 ಕಾರ್ಯಕ್ರಮದ ಅಂತ್ಯದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿದೆ.
ವಿ.ಸೂ: ಶಾಸಕರಿಗೆ ವೈಯಕ್ತಿಕವಾಗಿ ಶುಭ ಕೋರಲು ಅವಕಾಶ ಕಲ್ಪಿಸಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!