ಬೆಂಗಳೂರು, ಸೆ.12:ಕರ್ನಾಟಕ ಸಾರಿಗೆ ಇಲಾಖೆಯು ಮಹತ್ವದ ಪ್ರಕಟಣೆ ಹೊರಡಿಸಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯದ ನಿರ್ದೇಶನದಂತೆ NIC ಅಭಿವೃದ್ಧಿಪಡಿಸಿರುವ ಕೇಂದ್ರಿಕೃತ “ವಾಹನ್” ತಂತ್ರಾಂಶವನ್ನು ರಾಜ್ಯದ ಎಲ್ಲಾ RTO ಕಛೇರಿಗಳಲ್ಲಿ 2019ರಿಂದ ಬಳಸಲಾಗುತ್ತಿದೆ.

ವಾಹನಗಳ Horse Power, Cubic Capacity, Wheelbase, Cost of Vehicle ಮುಂತಾದ ಮಾಹಿತಿಗಳು ತಂತ್ರಾಂಶದಲ್ಲಿ ನಮೂದಾಗದಿದ್ದರೆ, ಆ ವಾಹನಗಳಿಗೆ Clearance Certificate (CC)/No Objection Certificate (NOC) ನೀಡುವ ವಹಿವಾಟು ತಂತ್ರಾಂಶದಲ್ಲಿ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ NIC ತಂತ್ರಾಂಶದಲ್ಲಿ ತಿದ್ದುಪಡಿ ಮಾಡಿದೆ.

ಅದಕ್ಕಾಗಿ, ವಾಹನ ಮಾಲೀಕರು ತಮ್ಮ ವಾಹನಗಳ ಸಂಬಂಧಿಸಿದ ದಾಖಲೆಗಳನ್ನು ತಕ್ಷಣವೇ ಸಂಬಂಧಿಸಿದ RTO ಕಛೇರಿಗಳಿಗೆ ಹಾಜರುಪಡಿಸಿ ಮಾಹಿತಿಯನ್ನು ಅಪ್ಡೇಟ್ ಮಾಡಿಸಿಕೊಳ್ಳಬೇಕು ಎಂದು ಇಲಾಖೆಯು ತಿಳಿಸಿದೆ. ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸಲ್ಲಿಸಿದ ದಾಖಲಾತಿಗಳನ್ನು ಪರಿಶೀಲಿಸಿ, ತಂತ್ರಾಂಶದಲ್ಲಿ ಮಾಹಿತಿಯನ್ನು ತಿದ್ದಿದ ಬಳಿಕ ಮಾತ್ರ CC/NOC ವಹಿವಾಟುಗಳು ಸಾಧ್ಯವಾಗಲಿವೆ.

ಸಾರಿಗೆ ಮತ್ತು ರಸ್ತೆ ಸುರಕ್ಷತಾ ಆಯುಕ್ತರು ವಾಹನ ಮಾಲೀಕರಿಗೆ ಸಹಕರಿಸಲು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!