

ಪುತ್ತೂರು: ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆ, ಸಂಪ್ಯ ವತಿಯಿಂದ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಸೆಪ್ಟೆಂಬರ್ 11ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಶಿಬಿರದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ. ವಿಶಾಲ್ ಯು.ಪಿ, ಡಾ. ಸ್ವಾತಿ, ಡಾ. ಅನೀಸ್ ಕಡವತ್ ತಪಾಸಣೆ ನಡೆಸಿದರು. ವಿದ್ಯಾರ್ಥಿನಿಯರು, ಶಿಕ್ಷಕ ವೃಂದ ಮತ್ತು ಸಿಬ್ಬಂದಿಗಳಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದ್ದು, ಒಟ್ಟು 410 ಮಂದಿ ಇದರ ಪ್ರಯೋಜನ ಪಡೆದರು.
ಆಸ್ಪತ್ರೆಯ ಆಡಳಿತ ನಿರ್ದೇಶಕ ಆಶೀರ್ ಕಮ್ಮಾಡಿ, ಕಾರ್ಯನಿರ್ವಾಹಕ ನಿರ್ದೇಶಕ ಆಶೀಶ್ ಕಮ್ಮಾಡಿ, ಲ್ಯಾಬ್ ಇನ್‌ಚಾರ್ಜ್ ರಝಾಕ್ ಅಂಜಿತ್ತಡ್ಕ, ಪಿ.ಆರ್.ಒ ಅಬ್ದುಲ್ ರಝಾಕ್ ಸಾಲ್ಮರ, ಫಿಸಿಯೋಥೆರಪಿಸ್ಟ್ ಡಾ. ಅಫ್ರಾದ್ ಹಮೀದ್ ಮತ್ತು ಮುಶ್ರೀಫ್ ಶಿಬಿರ ಯಶಸ್ವಿಗೆ ಸಹಕರಿಸಿದರು.
ಕಾರ್ಯಕ್ರಮದ ಸಮಾರೋಪದಲ್ಲಿ ನಡೆದ ಸಭೆಗೆ ಕಾಲೇಜಿನ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅಬ್ದುಲ್ ರಶೀದ್ ಝನಿ ಉಪಸ್ಥಿತರಿದ್ದರು. ರಶೀದ್ ಸಂಪ್ಯ ಸ್ವಾಗತಿಸಿದರು.





