
ಪುತ್ತೂರು: ಪುತ್ತೂರು ಕಸಬಾ ಗ್ರಾಮದ ನಿವಾಸಿ ಶಿವಕುಮಾರ್ ಪಿ.ಬಿ (54) ರವರ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆಪ್ಟೆಂಬರ್ 15, 2025 ರಂದು ಬೆಳಿಗ್ಗೆ ಶಿವಕುಮಾರ್ ಅವರು ತಮ್ಮ ಮೊಬೈಲ್ ಮೂಲಕ ಫೇಸ್‌ಬುಕ್ ವೀಕ್ಷಿಸುತ್ತಿದ್ದಾಗ, ಆರೋಪಿ ನವೀನ್ ರೈ ಕೈಕಾರ ಎಂಬಾತನು ರಾಜಕೀಯ ಪಕ್ಷವೊಂದರ ನಾಯಕರಿಗೆ ಅವ್ಯಾಚ ಶಬ್ದ ಬಳಸಿ ನಿಂದಿಸಿರುವ ವಿಡಿಯೋವನ್ನು ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಪ್ರಸಾರ ಮಾಡಿರುವುದು ಕಂಡುಬಂದಿದೆ.
ಈ ಕುರಿತು ನೀಡಿದ ದೂರಿನ ಆಧಾರದ ಮೇಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 81/2025, ಕಲಂ 296 BNS 2023ರಂತೆ ಪ್ರಕರಣ ದಾಖಲಾಗಿದೆ.






