ಸುಳ್ಯ, ಸೆ.19 – ಸುಳ್ಯ ಪೊಲೀಸ್ ಠಾಣೆಯ ಸಿಬ್ಬಂದಿ ಅಡಿಕೆ ಕಳ್ಳತನ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿದ್ದಾರೆ.

ಅಜ್ಜಾವರ ಪೇಟೆಯ ದಿನಸಿ ಅಂಗಡಿಯ ಮಾಲಕರ ಮಹಮ್ಮದ್ ರಫೀಕ್ ಎಸ್.ಡಿ. ಅವರ ಗೋಡೌನ್‌ನಿಂದ ಸೆ.12ರಂದು ರಾತ್ರಿ ಅಡಿಕೆ ಕಳ್ಳತನವಾದ ಘಟನೆ ದಾಖಲಾಗಿದ್ದು (ಸುಳ್ಯ ಪೊಲೀಸ್‌ ಠಾಣಾ ಪ್ರಕರಣ ಸಂಖ್ಯೆ 103/2025, ಕಲಂ 331(4), 305(ಎ), 3(5) ಬಿಎನ್‌ಎಸ್‌-2023), ತನಿಖೆ ತ್ವರಿತವಾಗಿ ಮುಂದುವರಿದಿತು.

ತನಿಖೆಯಲ್ಲಿ, ಸುಪ್ರಿತ್ ಕೆ (22, ಮಂಡೆಕೋಲು) ಮತ್ತು ಮಹಮ್ಮದ್ ಸಿನಾನ್ (21, ಜಾಲ್ಸೂರು) ಅವರನ್ನು ಸೆ.19ರಂದು ಮಂಡೆಕೋಲು ಗ್ರಾಮ ಮುರೂರು ಚೆಕ್‌ಪೋಸ್ಟ್ ಬಳಿ ವಶಕ್ಕೆ ಪಡೆದುಕೊಂಡರು. ಆರೋಪಿಗಳು ಕಳ್ಳತನ ಮಾಡಿದ 1 ಕ್ವಿಂಟಲ್ ಅಡಿಕೆ ಸಾಗಿಸಲು ಬಳಸುತ್ತಿದ್ದ ಕೆಎ 21 ಸಿ 5862ನೇ ನಂಬರಿನ ಆಟೋ ರಿಕ್ಷಾವನ್ನು ಪೊಲೀಸರು ವಶಪಡಿಸಿಕೊಂಡರು.

ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಕ್ರಮ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!