
ಮಂಗಳೂರು, ಸೆ.20 – ಮುಲ್ಕಿ ಪೊಲೀಸರು ಗಾಂಜಾ ಮಾರಾಟ ಯತ್ನಿಸುತ್ತಿದ್ದ ಆರೋಪಿ ಒಬ್ಬನನ್ನು ದಸ್ತಗಿರಿ ಮಾಡಿ, ಮಾದಕ ವಸ್ತು ಹಾಗೂ ವಾಹನ ವಶಪಡಿಸಿಕೊಂಡಿದ್ದಾರೆ.
ಸೆ.14ರಂದು ಗಾಂಜಾ ಸೇವನೆ ಪ್ರಕರಣದಲ್ಲಿ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ (25, ಕಾಪಿಕಾಡು), ಪ್ರಮೊದ್ (22, ಬೈಕಂಪಾಡಿ ಕೋರಿಕಟ್ಟ್) ಹಾಗೂ ಸ್ಟೀವನ್ (29, ಮುಲ್ಕಿ) ಬಂಧಿತರಾಗಿದ್ದರು. ಈ ಪ್ರಕರಣದ ತನಿಖೆ ಮುಂದುವರಿಯುತ್ತಿದ್ದ ವೇಳೆ, ಸೆ.20ರಂದು ಸುರತ್ಕಲ್ ಕಾಟಿಪಳ್ಳ ಕೃಷ್ಣಾಪುರ ನಿವಾಸಿ ಯತಿರಾಜ್ (27, ತಂದೆ ಲೇಟ್ ಲಕ್ಷ್ಮಣ) ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಮಾಹಿತಿ ಆಧಾರದಲ್ಲಿ ಪೊಲೀಸರು ದಸ್ತಗಿರಿ ನಡೆಸಿದರು.
ಆತನಿಂದ 1.2 ಕೆ.ಜಿ. ಗಾಂಜಾ, ಒಂದು ಆಟೋ ರಿಕ್ಷಾ, ಹಾಗೂ ರೂ.300 ನಗದು (ಮಾರಾಟದಿಂದ ಬಂದದ್ದು) ವಶಪಡಿಸಿಕೊಳ್ಳಲಾಗಿದೆ.
ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.






