
ಮಂಗಳೂರು, ಸೆ.22 – ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಅಕ್ರ.135/2016ರಲ್ಲಿ (ಕಲಂ 323, 324, 354, 149 ಐಪಿಸಿ) ದಾಖಲಾಗಿರುವ ಪ್ರಕರಣದ ವಿಚಾರಣೆಯಲ್ಲಿ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟಾಸಾಮಿ ಹನೀಫ್ @ ಅಬ್ದುಲ್ ಹನೀಫ್ (ತಂದೆ: ಅಂದುಞ), ವಾಸ: ಓಎಂ ವಿಲ್ಲ, ವಳಪೆಲ್ ಹೌಸ್, ಪೆರವಾಡ ಪೆಟ್ರೋಲ್ ಪಂಪ್ ಹತ್ತಿರ, ಕುಂಬಳೆ, ಕಾಸರಗೋಡು ಜಿಲ್ಲೆ (ಕೇರಳ) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮಾನ್ಯ 6ನೇ ಜೆಎಂಎಫ್‌ಸಿ ನ್ಯಾಯಾಲಯ ಮಂಗಳೂರು, ಸಿ.ಸಿ. ನಂ.1059/2018ರಂತೆ ಕಳೆದ ಒಂದು ವರ್ಷದಲ್ಲಿ ಒಟ್ಟು 9 ಬಾರಿ ವಾರೆಂಟ್ ಹೊರಡಿಸಿದ್ದರೂ, ಹನೀಫ್ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ್ದರಿಂದ ಕಲಂ 269 ಬಿಎನ್ಎಸ್ 2023ರಂತೆ ಪೊಲೀಸರು ಅವನ ಪತ್ತೆ ಹಚ್ಚಿ ಕ್ರಮ ಕೈಗೊಂಡರು.
ಮಂಗಳೂರು ಪೂರ್ವ ಠಾಣೆಯ ಎಎಸ್ಐ ಮಚೇಂದ್ರನಾಥ್ ಜೋಗಿ ಹಾಗೂ ಎಚ್‌ಸಿ 865 ನಾರಪ್ಪ ಕೆ.ಬಿ. ಅವರ ನೇತೃತ್ವದಲ್ಲಿ ವಾರೆಂಟ್ ಸಿಬ್ಬಂದಿ ಕಾಸರಗೋಡು ಜಿಲ್ಲೆಯ ಕುಂಬಳೆಯಲ್ಲಿ ಹನೀಫ್‍ನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಮಾನ್ಯ ನ್ಯಾಯಾಲಯವು ಆರೋಪಿ ಹನೀಫ್‌ಗೆ 4 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.






