
ಕೊಚ್ಚಿ: ಕೊಲ್ಲಿ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕುವೈತ್‌ನ ಅಲ್ ಅಹ್ಲಿ ಬ್ಯಾಂಕ್‌ನಿಂದ ಸಾಲ ಪಡೆದು ಮರುಪಾವತಿ ಮಾಡದ ಕೇರಳದ 13 ಶುಶ್ರೂಷಕಿಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣ ದಾಖಲಿಸುವ ಮೊದಲು ಗಲ್ಫ್ ಬ್ಯಾಂಕ್‌ನ ಅಧಿಕಾರಿಗಳು ಕೇರಳ ಪೊಲೀಸರನ್ನು ಸಂಪರ್ಕಿಸಿದ್ದರು. 2024ರಿಂದ ಇಲ್ಲಿಯವರೆಗೆ ಇಂಥ ಒಟ್ಟು 10 ಪ್ರಕರಣಗಳು ದಾಖಲಾಗಿವೆ.
‘2019ರಿಂದ 2021ರ ಅವಧಿಯಲ್ಲಿ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಕುವೈತ್‌ನಲ್ಲಿ ಕೆಲಸ ಮಾಡುವಾಗ ಕೇರಳದ ಈ 13 ಶುಶ್ರೂಷಕಿಯರು ಸಾಲ ಪಡೆದಿದ್ದರು. ಸುಸ್ತಿದಾರರ ಬಾಕಿ ಮೊತ್ತ ₹10.33 ಕೋಟಿಯಾಗಿದ್ದು, ನೌಕರಿ ಒಪ್ಪಂದ ಕೊನೆಗೊಂಡ ನಂತರ ಇವರೆಲ್ಲರೂ ಕೇರಳಕ್ಕೆ ಮರಳಿದ್ದರು. ನಂತರ ಉತ್ತಮ ಅವಕಾಶಗಳನ್ನು ಅರಸಿ ಯುರೋಪ್ ಮತ್ತು ಪಶ್ಚಿಮದ ದೇಶಗಳಿಗೆ ವಲಸೆ ಹೋಗಿದ್ದಾರೆ. ಈವರೆಗೂ ಪಡೆದ ಸಾಲವನ್ನು ತೀರಿಸಿಲ್ಲ’ ಎಂದು ಅಲ್ ಅಹ್ಲಿ ಬ್ಯಾಂಕ್ ಪ್ರತಿನಿಧಿಸುವ ಜೇಮ್ಸ್ ಮತ್ತು ಥಾಮಸ್ ಅಸೋಸಿಯೇಟ್ಸ್‌ನ ಥಾಮಸ್ ಜೆ. ಅನಕ್ಕಲ್ಲುಂಕುಲ್ ಆರೋಪಿಸಿದ್ದಾರೆ.






