ಪುತ್ತೂರು: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಬಳಿ ಇರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಡೆಯುತ್ತಿರುವ 91ನೇ ವರ್ಷದ ಶಾರದೋತ್ಸವ ಸೆಪ್ಟೆಂಬರ್‌ 22ರಂದು ನವರಾತ್ರಿ ಪೂಜೆಯಿಂದ ಭವ್ಯವಾಗಿ ಆರಂಭಗೊಂಡಿದೆ.

ಸೆಪ್ಟೆಂಬರ್‌ 29ರಂದು ಶ್ರೀ ಶಾರದೆಯ ವಿಗ್ರಹ ಪ್ರತಿಷ್ಠೆ, ಸೆಪ್ಟೆಂಬರ್‌ 30ರಂದು ಸಾಮೂಹಿಕ ಚಂಡಿಕಾ ಹೋಮ ಹಾಗೂ ಅಕ್ಟೋಬರ್‌ 2ರಂದು ಬೊಳುವಾರಿನಿಂದ ದರ್ಬೆಯ ತನಕ ಶೋಭಾಯಾತ್ರೆ ನಡೆಯಲಿದೆ. ಈ ಸಂದರ್ಭದಲ್ಲಿ ಪುತ್ತೂರು ಪೇಟೆ ಮೈಸೂರು ದಸರಾ ಮಾದರಿಯಲ್ಲಿ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸಲಿದೆ ಎಂದು ಶ್ರೀ ಶಾರದಾ ಭಜನಾ ಮಂದಿರದ ಅಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹೊರರಾಜ್ಯದ 14 ಕಲಾತಂಡಗಳ ಆಕರ್ಷಣೆ

ಶೋಭಾಯಾತ್ರೆಯಲ್ಲಿ ಹೊಸತನ ತರುವ ಉದ್ದೇಶದಿಂದ ಹೊರರಾಜ್ಯದ 14 ಕಲಾತಂಡಗಳು ಕಲಾ ಪ್ರದರ್ಶನ ನೀಡಲಿವೆ. ಶಾಸಕರಾದ ಅಶೋಕ್ ಕುಮಾರ್ ರೈ ಪುಷ್ಪಾರ್ಚನೆ ಮಾಡಲಿದ್ದು, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು ಚಾಲನೆ ನೀಡಲಿದ್ದಾರೆ.

ಶೋಭಾಯಾತ್ರೆಯ ಆರಂಭದಲ್ಲಿ ಕುಣಿತ ಭಜನೆ, ಅದರ ಹಿಂದೆ 14 ಕಲಾತಂಡಗಳ ಪ್ರದರ್ಶನ, ನಂತರ ಶ್ರೀ ಶಾರದೆಯ ವಿಗ್ರಹವನ್ನು ಸಾಗಿಸಲಾಗುವುದು.




ಡಿಜೆ, ಪಟಾಕಿ ನಿಷೇಧ: ಶಿಸ್ತಿಗೆ ಆದ್ಯತೆ

ಉತ್ಸವ ಸಮಿತಿ ವ್ಯವಸ್ಥಾಪಕ ಡಾ. ಸುರೇಶ್ ಪುತ್ತೂರಾಯ ಹೇಳಿದರು:
“ಮೂರು ವರ್ಷಗಳ ಹಿಂದೆಯೇ ನಾವು ಶೋಭಾಯಾತ್ರೆಯಲ್ಲಿ ಡಿಜೆ, ಪಟಾಕಿ, ನಾಸಿಕ್ ಬ್ಯಾಂಡ್ ನಿಷೇಧಿಸಿದ್ದೇವೆ. ಸರಕಾರ ಈಗ ಡಿಜೆಗೆ ಕಡಿವಾಣ ಹಾಕಿದೆ, ಆದರೆ ನಾವು ಶಿಸ್ತುಬದ್ಧತೆಗೆ ಒತ್ತು ನೀಡಿದ್ದೇವೆ.”

ಹುಲಿವೇಷಕ್ಕೂ ಅವಕಾಶ

ಶ್ರೀ ಶಾರದೆಯ ಜಲಸ್ತಂಭನದ ಸಂದರ್ಭದಲ್ಲಿ ಹುಲಿವೇಷದವರು ಜಲಸಂಪ್ರೋಕ್ಷಣೆಯಲ್ಲಿ ಭಾಗವಹಿಸುತ್ತಾರೆ. ಭಕ್ತರ ಆಶಯದಂತೆ ಶೋಭಾಯಾತ್ರೆಯಲ್ಲೂ ಶಿಸ್ತುಬದ್ಧವಾಗಿ ಸೇವಾ ರೂಪದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸೀತಾರಾಮ ರೈ ತಿಳಿಸಿದರು.

ಕಲಾತಂಡಗಳ ಪಟ್ಟಿ

ಸಹಸ್ರಬೆಳಕು ಕಲಾತಂಡ

ದೇವಂ ನೃತ್ಯ ಕಲಾ ತಂಡ

ವೀಳಕಟ್ಟಾಂ

ಫ್ಲವರ್ ಡ್ಯಾನ್ಸ್

ಸಿಂಗಾರಿ ಕಾಪಾಡಿ ಕಲಾತಂಡ

ಶ್ರೀ ದೇವಿಯ ಭವ್ಯ ಫಲಕದ ರಥ

ಕರಿಂಕಾಳಿ ತಂಡ

ಕಥಕ್ಕಳಿ ತಂಡ

ಪೂಕಾವಡಿ ತಂಡ

ಆಂಧ್ರ ಕಲಾತಂಡ

ಕೊಟ್ಟಾಯಂನ ಗರುಡ ಯಾನ

ಚೆಂಡೆ ಮೇಳ

ಸಿಂಗಾರಿ ಮೇಳ

ಕೊನೆಗೆ ಶ್ರೀ ಶಾರದೆಯ ವಿಗ್ರಹ

ಸೆ.30ರಂದು ಸಾಮೂಹಿಕ ಚಂಡಿಕಾ ಯಾಗ

ನವರಾತ್ರಿ ಉತ್ಸವದ ಅಂಗವಾಗಿ ಸೆಪ್ಟೆಂಬರ್‌ 30ರಂದು ಬೆಳಿಗ್ಗೆ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಚಂಡಿಕಾ ಯಾಗ ನಡೆಯಲಿದೆ. ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ನಡೆಯುವ ಯಾಗದಲ್ಲಿ ಮಧ್ಯಾಹ್ನ ಪೂರ್ಣಾಹುತಿ ಬಳಿಕ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!