ಪುತ್ತೂರು: ಎ.ವಿ.ಜಿ ಅಸೋಸಿಯೇಟ್ಸ್, ಎ.ವಿ.ಜಿ ಕನ್ಸ್ಟ್ರಕ್ಷನ್ಸ್, ಎ.ವಿ.ಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ಮುಂತಾದ ಸಂಸ್ಥೆಗಳ ಮೂಲಕ ಶಿಕ್ಷಣ ಹಾಗೂ ಉದ್ಯಮ ಕ್ಷೇತ್ರದಲ್ಲಿ ಕೊಡುಗೆ ನೀಡುತ್ತಿರುವ ಎ.ವಿ.ಜಿ. ಆಡಳಿತ ಮಂಡಳಿಯಿಂದ ಸಹಕಾರಿ ಕ್ಷೇತ್ರಕ್ಕೆ ಹೊಸ ಕೊಡುಗೆಯಾಗಿ ಎ.ವಿ.ಜಿ. ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ ಸೊಸೈಟಿ ಲಿ. ದ.ಕ. ಸಂಸ್ಥೆಯು ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ ಸೆಪ್ಟೆಂಬರ್‌ 29 ರಂದು ಲೋಕಾರ್ಪಣೆಗೊಳ್ಳುತ್ತಿದೆ.

ಸಂಸ್ಥೆಯ ಅಧ್ಯಕ್ಷ ಕಳುವಾಜೆ ವೆಂಕಟ್ರಮಣ ಕಳುವಾಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಸುಭದ್ರ ಭಾರತಕ್ಕಾಗಿ ಸಮರ್ಥ ಸಹಕಾರಿ ಸಂಸ್ಥೆ” ಎಂಬ ನಂಬಿಕೆಯಿಂದ ಈ ನೂತನ ಪ್ರಯತ್ನವನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.

ಬೆಳಗ್ಗೆ 6.00ಕ್ಕೆ ಗಣಹೋಮದೊಂದಿಗೆ ಕಾರ್ಯಕ್ರಮ ಆರಂಭಗೊಂಡು, 9.30ಕ್ಕೆ ಕಚೇರಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ರಾಜ್ಯಾಧ್ಯಕ್ಷ ಸಿ.ಜೆ. ಗಂಗಾಧರ ಕಚೇರಿಯ ಉದ್ಘಾಟನೆ

ಮಾಜಿ ಶಾಸಕ ಸಂಜೀವ ಮಠಂದೂರು ಭದ್ರತಾ ಕೋಶ ಉದ್ಘಾಟನೆ

ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲೊಟ್ಟು ಗಣಕಯಂತ್ರ ಉದ್ಘಾಟನೆ

ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ಅಧ್ಯಕ್ಷ ಭಾಸ್ಕರ ದೇವಸ್ಯ ಅಧ್ಯಕ್ಷರ ಕೊಠಡಿ ಉದ್ಘಾಟನೆ ಮಾಡಲಿದ್ದಾರೆ.


ಮುಖ್ಯ ವೇದಿಕೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು,

ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಪ್ರಥಮ ಸಾಲ ಪತ್ರ ವಿತರಣೆ,

ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್. ಠೇವಣಿ ಪತ್ರ ವಿತರಣೆ,

ಮಹಾಲಿಂಗೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ಟ ಚಿಹ್ನೆ ಅನಾವರಣ ನೆರವೇರಿಸಲಿದ್ದಾರೆ.


ಮುಖ್ಯ ಅತಿಥಿಗಳಾಗಿ ಭಾರತಿ ಜಿ. ಭಟ್ (ರಾಜ್ಯ ಸೌಹಾರ್ದ ಸಹಕಾರ ನಿರ್ದೇಶಕಿ), ಚಿದಾನಂದ ಬೈಲಾಡಿ (ಪುತ್ತೂರು ಒಕ್ಕಲಿಗ ಪತ್ತಿನ ಸಹಕಾರ ಸಂಘ), ರವಿ ಮುಂಗ್ಲಿಮನೆ (ಒಕ್ಕಲಿಗ ಗೌಡ ಸೇವಾ ಸಂಘ), ಕಾವು ಹೇಮನಾಥ ಶೆಟ್ಟಿ (ಬಂಟರ ಸಂಘ), ಸತೀಶ್ ಕುಮಾರ್ ಕೆಡೆಂಜಿ (ಬಿಲ್ಲವ ಸಂಘ) ಹಾಜರಿರಲಿದ್ದಾರೆ.

ಸಮಾಜಮುಖಿ ಆಫರ್‌ಗಳು
ಸಂಸ್ಥೆಯು 2025ರ ಅಂತ್ಯದೊಳಗೆ ಎಲ್ಲ ಠೇವಣಿಗಳಿಗೂ ಹೆಚ್ಚುವರಿ ಶೇ.0.25 ಬಡ್ಡಿ ನೀಡಲಿದೆ. ಅಲ್ಲದೆ,

ಯೋಧರಿಗೆ ಶೇ.0.50% ಹೆಚ್ಚುವರಿ ಬಡ್ಡಿ

ಮಹಿಳೆಯರಿಗೆ ಶೇ.0.25%

ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಿಗೆ ಶೇ.0.50% ಹೆಚ್ಚುವರಿ ಬಡ್ಡಿ ದೊರೆಯಲಿದೆ.


ವಿಶೇಷತೆಗಳು:

99 ತಿಂಗಳಲ್ಲಿ ದ್ವಿಗುಣಗೊಳ್ಳುವ ಎ.ವಿ.ಜಿ ಕ್ಯಾಶ್ ಸರ್ಟಿಫಿಕೇಟ್

ಆಕರ್ಷಕ ಆರ್.ಡಿ. ಹಾಗೂ ನಿರಖು ಠೇವಣಿ ಬಡ್ಡಿ

ವಿವಿಧ ಸಾಲ ಸೌಲಭ್ಯಗಳು


ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ಉಮೇಶ ಮಳುವೇಲು, ನಿರ್ದೇಶಕರು ಎ.ವಿ. ನಾರಾಯಣ, ಸೀತಾರಾಮ ಕೇವಳ, ಗುಡ್ಡಪ್ಪ ಗೌಡ ಬಲ್ಯ, ಸಿಇಒ ಸೀತಾರಾಮ ಗೌಡ ಕಾಂತಿಲ ಹಾಗೂ ಎ.ವಿ.ಜಿ. ಇಂಗ್ಲೀಷ್ ಮೀಡಿಯಂ ಸ್ಕೂಲ್ ನಿರ್ದೇಶಕಿ ಪ್ರತಿಭಾದೇವಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Join WhatsApp Group
error: Content is protected !!