
ಮುಕ್ವೆ: ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಗರೀಬ್ ನವಾಝ್ ಚಾರಿಟೇಬಲ್ ಟ್ರಸ್ಟ್ ಮುಕ್ವೆ ಜಂಟಿ ಸಹಯೋಗದೊಂದಿಗೆ ಮುಕ್ವೆಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಶಿಬಿರದಲ್ಲಿ ಇನ್ನೂರಕ್ಕೂ ಹೆಚ್ಚು ಜನರು ಭಾಗವಹಿಸಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ವೈದ್ಯರ ತಂಡವು ಸಾಮಾನ್ಯ ತಪಾಸಣೆಗಳ ಜೊತೆಗೆ ರಕ್ತದ ಒತ್ತಡ, ಮಧುಮೇಹ, ಎಲುಬು ಮತ್ತು ಮೂಳೆ, ಹೃದಯ ಸಂಬಂಧಿ ತಪಾಸಣೆಗಳನ್ನು ನೆರವೇರಿಸಿದರು. ಹಿರಿಯ ವೈದ್ಯರು ಮತ್ತು ತಜ್ಞರು ಆರೋಗ್ಯ ಕಾಳಜಿಯ ಮಹತ್ವವನ್ನು ವಿವರಿಸಿ, ದಿನನಿತ್ಯ ಜೀವನದಲ್ಲಿ ಅನುಸರಿಸಬೇಕಾದ ಆರೋಗ್ಯಕರ ಜೀವನಶೈಲಿಯ ಕುರಿತು ಮಾರ್ಗದರ್ಶನ ನೀಡಿದರು.
ಶಿಬಿರದ ಯಶಸ್ಸಿಗೆ ಮೆಡ್ ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ನುರಿತ ತಜ್ಞರು, ಸಿಬ್ಬಂದಿ, ಗರೀಬ್ ನವಾಝ್ ಟ್ರಸ್ಟ್ ಸದಸ್ಯರು, ಸ್ವಯಂಸೇವಕರು ಮತ್ತು ಸ್ಥಳೀಯ ನಾಗರಿಕರು ಸಹಕರಿಸಿದರು.
ಶಿಬಿರದ ಮುನ್ನ ನಡೆದ ಸಭಾ ಕಾರ್ಯಕ್ರಮವನ್ನು ರಹ್ಮಾನಿಯ ಜುಮಾ ಮಸೀದಿ ಮುಕ್ವೆ ಖತೀಬ ಇರ್ಷಾದ್ ಫೈಝಿ ದುವಾದೊಂದಿಗೆ ಆರಂಭಿಸಿದರು. ಪುರುಷರಕಟ್ಟೆ ಮದ್ರಸದ ಮುಖ್ಯ ಗುರು ರಿಯಾಝ್ ಫೈಝಿ ಪಟ್ಟೆ ಉದ್ಘಾಟನೆ ನೆರವೇರಿಸಿದರು. ಗರೀಬ್ ನವಾಝ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉಸ್ಮಾನ್ ಹಾಜಿ ಪಿ ಎಸ್ ಚಿಕ್ಕಳ ಕಾರ್ಯಕ್ರಮವನ್ನು ಅಧ್ಯಕ್ಷತೆಯಲ್ಲಿ ನಡೆಸಿದರು.
ಮುಖ್ಯ ವೇದಿಕೆಯಲ್ಲಿ ಅಬ್ದುಲ್ಲ ಕುಞಿ ಪಟ್ಟೆ, ಜೈನುದ್ದೀನ್ ಹಾಜಿ ಮುಕ್ವೆ, ಅಬ್ದುಲ್ ರೆಹಮಾನ್ ಹಾಜಿ ಬಾಲಯ, ಅಶ್ರಫ್ ಬೆದ್ರಾಳ ಚಿಕ್ಕಳ, ಜಮಾಲುದ್ದೀನ್ ಹಾಜಿ ಮುಕ್ವೆ, ಖಾದರ್ ಕೂರ್ನಡ್ಕ, ಹಾಜಿ ಇಬ್ರಾಹಿಂ ಸಿಬಾರ, ಅಬ್ದುಲ್ಲಾ ಹಾಜಿ ಮೈಸೂರ್, ಅಬೂಬಕ್ಕರ್ ಹಾಜಿ ಮಾಯಂಗಳ, ಕಲಂದರ್ ಶಾಫಿ ಮುಕ್ವೆ, ಡಾ. ಅಮೀನ್, ಹನೀಫ್ ಪುರುಷರಕಟ್ಟೆ, ಮಹೇಶ್ ಚಂದ್ರ ಸಾಲಿಯಾನ್, ಝುಬೈರ್ ಪಿಕೆ, ಇಲ್ಯಾಸ್ ಮುಕ್ವೆ, ಸುಭಾಷ್ ಚಂದ್ರ ಶೆಣೈ, ಆರ್ ಬಿ ರಜಾಕ್ ಬೀಟಿಗೆ, ಹಂಝ ಕೆ ಎಂ ಸಾಲ್ಮರ, ಡಾ. ಬಾಲಸುಬ್ರಮಣ್ಯ ಮುಕ್ವೆ, ಹಾಜಿ ಉಮರ್ ಕುದ್ಕೋಳಿ, ಲಿತೀಫ್ ರೈನ್ಬೋ ಮುಕ್ವೆ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಅಶ್ರಫ್ ಮುಕ್ವೆ ಸ್ವಾಗತಿಸಿ, ಕಾರ್ಯದರ್ಶಿ ಸಿದ್ದೀಕ್ ಮುಕ್ವೆ ಪ್ರಾಸ್ತಾವಿಕ ಮಾತುಗಳನ್ನು ನೀಡಿದರು.






