
ಗಾಝಾದ ಮೇಲಿನ ಇಸ್ರೇಲ್ ನ ಯುದ್ಧವನ್ನು ಅಂತ್ಯಗೊಳಿಸಲು 20 ಅಂಶಗಳ ಯೋಜನೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಪ್ಪಿಕೊಂಡಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಓವಲ್ ಕಚೇರಿಯಲ್ಲಿ ಇಬ್ಬರು ನಾಯಕರ ನಡುವಿನ ಮಹತ್ವದ ಮಾತುಕತೆ ನಂತರ ಶ್ವೇತಭವನ ಈ ಯೋಜನೆಯನ್ನು ಪ್ರಕಟಿಸಿದೆ.
ಟ್ರಂಪ್ ತಮ್ಮ ಭಾಷಣದಲ್ಲಿ, ಹಮಾಸ್ ಒಪ್ಪಿದರೆ ಎಲ್ಲಾ ಸೆರೆಯಾಳುಗಳನ್ನು 72 ಗಂಟೆಗಳೊಳಗೆ ಬಿಡುಗಡೆ ಮಾಡುವ ಪ್ರಸ್ತಾವನೆಗೆ ಅವಕಾಶವಿದೆ ಎಂದು ತಿಳಿಸಿದ್ದಾರೆ. “ಬಂಧಿತರು ಹಿಂತಿರುಗುತ್ತಿದ್ದಾರೆ… ಯುವಕರ ಶವಗಳು ತಕ್ಷಣವೇ ಹಿಂತಿರುಗುತ್ತಿವೆ,” ಎಂದು ಅವರು ಘೋಷಿಸಿದ್ದಾರೆ.
ಶ್ವೇತಭವನದ ಮೂಲಗಳ ಪ್ರಕಾರ, ಈ ತಿಂಗಳ ಆರಂಭದಲ್ಲಿ ದೋಹಾದ ಮೇಲಿನ ಇಸ್ರೇಲಿ ದಾಳಿಯಲ್ಲಿ ನಾಗರಿಕನೊಬ್ಬ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ನೆತನ್ಯಾಹು ಖತರ್ ಬಳಿ ಕ್ಷಮೆಯಾಚಿಸಿದ್ದಾರೆ ಎಂದು Aljazeera ವರದಿ ಮಾಡಿದೆ.






