ಪುತ್ತೂರು: 67 ವರ್ಷಗಳ ಇತಿಹಾಸವಿರುವ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ (ನಿ.), ಪುತ್ತೂರು ತನ್ನ 17ನೇ ಶಾಖೆಯನ್ನು ಕಲ್ಲಡ್ಕದಲ್ಲಿ ಆರಂಭಿಸುತ್ತಿದೆ. ಅ. 2ರಂದು (ಗುರುವಾರ) ಬೆಳಿಗ್ಗೆ 10.30ಕ್ಕೆ ಕಲ್ಲಡ್ಕ ಕೆ.ಸಿ.ರೋಡಿನ ಈಶಾನ ಕಾಂಪ್ಲೆಕ್ಸ್‌ನಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ವಿವಿಧ ಗಣ್ಯರು ಉದ್ಘಾಟಿಸಲಿದ್ದಾರೆ.
ಉದ್ಘಾಟನೆ ಕಾರ್ಯಕ್ರಮ:
ಶಾಖೆ ಉದ್ಘಾಟನೆ: ಶ್ರೀ ಶಶಿಕುಮಾರ್ ರೈ ಬಾಲ್ಗೊಟ್ಟು (ಅಧ್ಯಕ್ಷರು, ದ.ಕ. ಜಿಲ್ಲಾ ಸಹಕಾರಿ ಯೂನಿಯನ್, ನಿರ್ದೇಶಕರು – ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್)
ಭದ್ರತಾ ಕೋಣೆ ಉದ್ಘಾಟನೆ: ಶ್ರೀಮತಿ ಪ್ರೇಮ (ಅಧ್ಯಕ್ಷರು, ಗೋಲ್ಡಮಜಲು ಗ್ರಾಮ ಪಂಚಾಯತ್)
ಅಧ್ಯಕ್ಷತೆ: ಶ್ರೀ ಭಾಸ್ಕರ ಎಂ. ಪೆರುವಾಯಿ (ವಕೀಲರು, ಪುತ್ತೂರು, ಅಧ್ಯಕ್ಷರು – ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ)
ಮುಖ್ಯ ಅತಿಥಿಗಳು:
ಶ್ರೀ ಕೆ. ಪದ್ಮನಾಭ ಕೊಟ್ಟಾರಿ, ಮಾಜಿ ಶಾಸಕರು, ವಿಟ್ಲ ವಿಧಾನಸಭಾ ಕ್ಷೇತ್ರ
ಶ್ರೀ ಕುಶಾಲಪ್ಪ ಕುಲಾಲ್, ವಕೀಲರು, ಮಂಗಳೂರು
ಶ್ರೀ ಕೆ. ಮಹಮ್ಮದ್ ಮುಸ್ತಾಫಾ, ಸದಸ್ಯರು, ಗೋಲ್ಡಮಜಲು ಗ್ರಾಮ ಪಂಚಾಯತ್
ಶ್ರೀ ಕರುಣಾಕರ ವಿ., KMAS ಮುಖ್ಯಾಧಿಕಾರಿಗಳು, ವಿಟ್ಲ ಪಟ್ಟಣ ಪಂಚಾಯತ್
ಶ್ರೀ ನಾರಾಯಣ ಸಿ. ಪೆರ್ನೆ, ನಿರ್ದೇಶಕರು, ದ.ಕ. ಜಿಲ್ಲಾ ವರ್ತಕರ ವಿವಿಧೋದ್ದೇಶ ಸಹಕಾರ ಸಂಘ, ಬಂಟ್ವಾಳ
ಶ್ರೀ ಗೋಪಾಲ ಕುಲಾಲ್, ಈಶಾನ ಕಾಂಪ್ಲೆಕ್ಸ್ ಕಟ್ಟಡ ಮಾಲಕರು
ಸಂಘದ ಸಾಧನೆಗಳು:
1959ರಲ್ಲಿ ಆರಂಭವಾದ ಈ ಸಹಕಾರ ಸಂಘವು ದ.ಕ., ಉಡುಪಿ, ಕೊಡಗು, ಮೈಸೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 16 ಶಾಖೆಗಳ ಮೂಲಕ ಸದಸ್ಯರಿಗೆ ಬ್ಯಾಂಕಿಂಗ್ ಮತ್ತು ಮಾರಾಟ ಸೇವೆ ಒದಗಿಸುತ್ತಿದೆ. ಪುತ್ತೂರು ಮತ್ತು ಬಿ.ಸಿ.ರೋಡಿನಲ್ಲಿ ಕುಂಬಾರಿಕೆ ಪ್ರದರ್ಶನ ಮಳಿಗೆ, ಪುತ್ತೂರಿನಲ್ಲಿ ಉತ್ಪಾದನಾ ತರಬೇತಿ ಕೇಂದ್ರ, ಹಾಗು ಗ್ರಾಮೀಣ ಕುಶಲ ಕರ್ಮಿಗಳಿಗೆ ಆಧುನಿಕ ಕುಂಬಾರಿಕೆ ತರಬೇತಿ, ಕಚ್ಚಾ ವಸ್ತುಗಳ ಪೂರೈಕೆ, ಮಾರುಕಟ್ಟೆ ಸೌಲಭ್ಯಗಳನ್ನು ಒದಗಿಸುತ್ತಿದೆ.
2024-25ರಲ್ಲಿ ಸಂಘವು ₹626.53 ಕೋಟಿ ವ್ಯವಹಾರ ನಡೆಸಿ ₹264.45 ಲಕ್ಷ ಲಾಭ ಗಳಿಸಿದ್ದು, ಎ-ವರ್ಗದ ಶ್ರೇಯಾಂಕವನ್ನು ಕಾಯ್ದುಕೊಂಡಿದೆ. 31-08-2025ರಂತೆ ₹135 ಕೋಟಿ ಠೇವಣಿ ಮತ್ತು ₹103.15 ಕೋಟಿ ಸಾಲ ಬಾಕಿ ಹೊಂದಿದೆ. ಹಿರಿಯ ನಾಗರಿಕರಿಗೆ ವಿಶೇಷ ಠೇವಣಿ ಪ್ರೋತ್ಸಾಹ, ಕುಂಬಾರಿಕೆ ಅಭಿವೃದ್ಧಿ ಸಾಲವನ್ನು ಕೇವಲ 9% ಬಡ್ಡಿದರದಲ್ಲಿ ನೀಡುವುದು, ಇ-ಸ್ಟಾಂಪ್, NEFT, RTGS ಮುಂತಾದ ಸೌಲಭ್ಯಗಳ ಮೂಲಕ ಸದಸ್ಯರಿಗೆ ಉತ್ತಮ ಸೇವೆಗಳನ್ನು ನೀಡುತ್ತಿದೆ.
ಕಲ್ಲಡ್ಕ ಶಾಖೆಯ ವಿಶೇಷತೆ:
ಈ ಹೊಸ ಶಾಖೆಯ ಪ್ರಾರಂಭದ ಪ್ರಯುಕ್ತ, ಸ್ವೀಕರಿಸಲ್ಪಡುವ ಠೇವಣಿಗಳಿಗೆ 10% ಬಡ್ಡಿದರವನ್ನು ನಿಗದಿಪಡಿಸಲಾಗಿದೆ.
ಸಹಕಾರ ಸಂಘದ ಧ್ಯೇಯವಾಕ್ಯ:
“ಸಹಕಾರದಿಂದ ಪ್ರಗತಿ – ಪ್ರಗತಿಗಾಗಿ ಸಹಕಾರ”
ಸಹಕಾರ ಸಂಘದ ಅಧ್ಯಕ್ಷರಾದ ಭಾಸ್ಕರ ಎಂ. ಪೆರುವಾಯಿ ಹಾಗೂ ನಿರ್ದೇಶಕರು, ಸಿಬ್ಬಂದಿ ವರ್ಗದವರು ಎಲ್ಲಾ ಸದಸ್ಯರು ಮತ್ತು ಜನತೆಗೆ ಆತ್ಮೀಯ ಆಹ್ವಾನ ನೀಡಿದ್ದಾರೆ.














