
ಪುತ್ತೂರು: ಬಪ್ಪಳಿಗೆ ಮಸ್ಜಿದುನೂರ್ ಜುಮಾ ಮಸೀದಿ ಮೊಹಲ್ಲಾದ ನಿವಾಸಿ, ಬ್ರಾಂಡೆಡ್ ವಾಚ್ ವ್ಯಾಪಾರಸ್ಥ ಪಿ.ಬಿ. ಅಬ್ದುಲ್ ರಹಿಮಾನ್ ಹಾಜಿ (ಅದ್ರಾಮ ಹಾಜಿ) ರವರು ಹೃದಯಾಘಾತದಿಂದ ಗುರುವಾರ ರಾತ್ರಿ 1.30ರ ಸುಮಾರಿಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಕೂರ್ನಡ್ಕ ನಿವಾಸಿ, ಕೆನರಾ ಬ್ಯಾಂಕ್‌ನ ನಿವೃತ್ತ ಉದ್ಯೋಗಿ ಹಾಜಿ ಮುಹಮ್ಮದ್ ಸಾಬ್, ಮರ್ಹೂಮ್ ಉಮ್ಮರ್ ಸಾಬ್ (ಪುತ್ತುಬಾವ), ಇಸ್ಮಾಯಿಲ್ (ಮಂಗಳೂರು, ಇಚ್ಚಾಲಿ ಬಪ್ಪಳಿಗೆ), ಪಿ.ಬಿ. ಅಬುಬಕ್ಕರ್ ರವರ ಕಿರಿಯ ಸಹೋದರರಾಗಿದ್ದರು.
ಮಯ್ಯತ್ ಸಂಧರ್ಶನಕ್ಕಾಗಿ ಕೂರ್ನಡ್ಕ ಫೀರ್ ಮೊಹಲ್ಲಾ ಜುಮಾ ಮಸೀದಿಯ ಬಳಿಯಲ್ಲಿರುವ ಅವರ ಹಿರಿಯ ಅಣ್ಣ ಹಾಜಿ ಮುಹಮ್ಮದ್ ಸಾಬ್ ರವರ ಮನೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಂಧರ್ಶನದ ಬಳಿಕ ಬಪ್ಪಳಿಗೆ ಮಸ್ಜಿದುನೂರ್ ಜುಮಾ ಮಸೀದಿಯಲ್ಲಿ ಮಯ್ಯತ್ ನಮಾಝ್ ನೆರವೇರಿಸಿ ದಫನ ಕಾರ್ಯ ನಡೆಯಲಿದೆ.
ಮೃತರು ಪತ್ನಿ, ಇಬ್ಬರು ಪುತ್ರರಾದ ರಿಫಾಯಿ ಮತ್ತು ರಾಝಿ ರವರನ್ನು ಅಗಲಿದ್ದಾರೆ.






