*ಸ್ವಾತಂತ್ರ್ಯ ಎಲ್ಲರ ಹಕ್ಕು**ವಿಚಾರಣಾಧೀನರಿಗೂ ಅದೇ ಹಕ್ಕು..*ಎಂಬ ಧ್ಯೇಯ ವಾಕ್ಯದೊಂದಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ನಗರ ಸಮಿತಿಯ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಸಮಿತಿ ಅಧ್ಯಕ್ಷರಾದ ತಾಜುದ್ದೀನ್ ಸಾಲ್ಮರಯ ವಹಿಸಿ, ಧ್ವಜಾರೋಹಣ ನೆರವೇರಿಸಿದರು. ಎಸ್.ಡಿ.ಟಿ.ಯು ರಾಜ್ಯ ಸಮಿತಿ ಸದಸ್ಯರಾದ ಹಮೀದ್ ಸಾಲ್ಮರ ಅವರು ಸ್ವಾತಂತ್ರ್ಯೋತ್ಸವದ ಸಂದೇಶ ಭಾಷಣ ಮಾಡಿದರು.ಈ ಸಂದರ್ಭದಲ್ಲಿ ಆಸಿಫ್ ಹಾಜಿ ಪರ್ಲಡ್ಕ, ಜೈನುದ್ದೀನ್ ಗೋಳಿಕಟ್ಟೆ,ಅಬೂಬಕ್ಕರ್ ಫಿಶ್, ಹಸನ್ ಅಕ್ಕರೆ,ಕಿಲ್ರಿಯಾ ಮಸ್ಜೀದ್ ಪರ್ಲಡ್ಕ ಅಧ್ಯಕ್ಷರಾದ ಅನ್ಸಾರ್ ಪರ್ಲಡ್ಕ, SDPI ಪುತ್ತೂರು ನಗರ ಸಮಿತಿ ಕಾರ್ಯದರ್ಶಿ ಇಫಾಝ್ ಬನ್ನೂರು,ಹರ್ಷದ್ ಹುಸೇನ್ ಸಮಿತಿ ಸದಸ್ಯರಾದ ಅಶ್ರಫ್ ಸ್ಪಂದನಾ, ಅಲಿ ಸಾಲ್ಮರ,ಪವಾಝ್ ಬನ್ನೂರು SDPI ಗೋಳಿಕಟ್ಟೆ ಬ್ರಾಂಚ್ ಅಧ್ಯಕ್ಷ ಇಶಾನ್,ಕಾರ್ಯದರ್ಶಿ ತುಫೈಲ್ ,ಹಮೀದ್ ದುಬೈ ಬುರ್ಖಾ ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು.ರಫೀಕ್ ಬಲ್ನಾಡ್ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.











